ಬಳ್ಳಾರಿಯ ತಾಲೂಕು ಕಚೇರಿ ಬಳಿ ಬೈಕ್ ಸವಾರರ ಮೇಲೆ ಲಾಠಿ ಚಾರ್ಜ್ ನಡೆದಿಲ್ಲ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಕೊರೊನಾ ವೈರಸ್ ಭೀತಿಯಿಂದ ಇಡೀ ಕರ್ನಾಟಕ ಲಾಕ್ ಡೌನ್ ಆಗಿದೆ. ಇದಕ್ಕೆ ಬಳ್ಳಾರಿ ಹೊರತಲ್ಲ. ನಾಗರೀಕರು ಮನೆಗಳಲ್ಲಿರಿ, ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸಬೇಡಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಎಂದು ಸರ್ಕಾರ ಆದೇಶಿಸಿದೆ.ಈ ಆದೇಶದ ಪಾಲನೆ ಮಾಡುವ ಸಲುವಾಗಿ ಬಳ್ಳಾರಿಯ ತಾಲೂಕು ಕಚೇರಿ ಬಳಿ ಬೈಕ್ ಮೇಲೆ ತೆರಳುತ್ತಿರುವ ಮೂವರ ಮೇಲೆ ಪೊಲೀಸ್‍ರು ಲಾಠಿ ಚಾರ್ಜ ಮಾಡುತ್ತಿರುವ ವಿಡಿಯೋ ದೃಶ್ಯವೊಂದು ಸಾಮಾಜೀಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದರ ಬಗ್ಗೆ ಪರಿಶೀಲಿಸಿದಾಗ ಇದು ಹಳೆಯ ವಿಡಿಯೋ ಎಂದು ತಿಳಿದು ಬಂದಿದೆ. ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತ ಗುಂಪನ್ನು ಚದುರಿಸುವಾಗ ನಡೆದ ಘಟನೆಯ ವಿಡಿಯೋ ಅದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಮಾಜೀಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಹಾವಳಿ ಮೀತಿಮೀರಿದೆ. ಅನಗತ್ಯ ಸಂಚಾರ ಬೇಡ ಎಂಬ ಜಾಗೃತಿಯನ್ನು ಜನರಿಗೆ ಧನಾತ್ಮಕವಾಗಿ ತಿಳಿ ಹೇಳುವ ಮೂಲಕ ಮಾಡೋಣ. ಸುಳ್ಳು ಸುದ್ದಿಗಳ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂಬುದು ಸಂಮಂಜಸವಲ್ಲ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter