ಡಾ.ಮನು ಬಳಿಗಾರರಿಗೆ ನಾಡೋಜ ಪ್ರಶಸ್ತಿ

ಬೆಳಗಾಯಿತು ವಾರ್ತೆ

ಹಂಪಿ: ಕನ್ನಡ ವಿಶ್ವವಿದ್ಯಾಲಯ ನೀಡುವ 86ನೇ ನಾಡೋಜ ಪದವಿ ಡಾ.ಮನು ಬಳಿಗಾರ ಆಯ್ಕೆಯಾಗಿದ್ದಾರೆ ಎಂದು

ಕುಲಪತಿ ಪ್ರೋ. ಎಸ್.ಮಲ್ಲಿಕಾ ಘಂಟಿ ಹೇಳಿದರು.

ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದರು.

ಜ.30 ರಂದು ಸಂಜೆ 5.30ಕ್ಕೆ ನಡೆಯುವ 27ನೇ ನುಡಿಹಬ್ಬ(ಘಟಿಕೋತ್ಸವ)ದಲ್ಲಿ ನಾಡೋಜವನ್ನು ನೀಡಲಾಗುತ್ತದೆ. ಈ

ಬಾರಿ ಒಬ್ಬರಿಗೆ ಮಾತ್ರ ನಾಡೋಜ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದುವರೆಗೂ 85 ಜನರಿಗೆ ನಾಡೋಜ ಗೌರವನ್ನು

ನೀಡಲಾಗಿದೆ. ಮನು ಬಳಿಗಾರ ಅವರು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಐದು ಆರು ಪ್ರಶಸ್ತಿಗಳು

ಹುಡುಕಿಕೊಂಡು ಬಂದಿವೆ ಎಂದು ತಿಳಿಸಿದರು.

ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಘಟಿಕೋತ್ಸವ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ

ಜಿ.ಟಿ.ದೇವೇಗೌಡ ಅವರು ಡಿ.ಲಿಟ್ ಹಾಗೂ ಪಿಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ವಿಕ್ರಮ್ ಸಾರಾಭಾಯಿ

ಪ್ರಾಧ್ಯಾಪಕ ಹಾಗೂ ಬೆಂಗಳೂರಿನ ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ ಕುಮಾರ ಭಾಷಣ ಮಾಡಲಿದ್ದಾರೆ. ಅಂದು

ಎಂದು ಹೇಳಿದರು.

ಇಬ್ಬರಿಗೆ ಡಿ.ಲಿಟ್ ಪ್ರಶಸ್ತಿ ಈ ಬಾರಿ ಲಭಿಸಿದೆ. ರಾಮದಾಸ್ ನಾಯ್ಡು ಅವರಿಗೆ ಸಿನಿಮಾಕ್ಕೆ ಸಂಬಂಧಿಸಿದ ಪ್ರಬಂಧಕ್ಕೆ

ನೀಡಲಾಗಿದೆ. ದಲಿತ ಚಳುವಳಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಬಂಧಿಸಿದಂತ ಪ್ರಬಂಧಕ್ಕೆ ಆರ್.ಮೋಹನ್ ರಾಜ್

ಅವರಿಗೆ ಡಿ.ಲಿಟ್ ನೀಡಲಾಗುತ್ತಿದೆ. ಪಿಎಚ್. ಡಿ-87, ಎಂ.ಫಿಲ್-26, ಎಂ.ಎ.ಪಿಎಚ್.ಡಿ ಕನ್ನಡ ಸಾಹಿತ್ಯಕ್ಕೆ-17 ಹಾಗೂ

ಮಹಿಳಾ ಅಧ್ಯಯನಕ್ಕೆ-4, ಎಂ.ವಿ.ಎ-12, ಬಿ.ಮ್ಯೂಸಿಕ್-08, ಸ್ನಾತಕೋತ್ತರ ಡಿಪ್ಲೋಮ-38, ಡಿಪ್ಲೋಮ-59,

ಬಿ.ವಿ.ಎ(ಚಿತ್ರಕಲೆ)-268, ವಿಶೇಷ ಪರಿಣಿತಿ ಡಿಪ್ಲೋಮ(ಚಿತ್ರಕಲೆ)-122 ಸೇರಿದಂತೆ ಒಟ್ಟು 645 ವಿದ್ಯಾರ್ಥಿಗಳಿಗೆ ಪದವಿ

ಗೌರವ ನೀಡಿ ಗೌರವಿಸಲಾಗುತ್ತದೆ ಎಂದರು.

ಮೂರು ವರ್ಷದ ಅವಧಿಯಲ್ಲಿ ಅಧ್ಯಾಪಕರ ಸಹಕಾರದಿಂದ ಭೌತಿಕ, ಬೌದ್ಧಿಕ ಕೆಲಸ ಮಾಡಿದ ತೃಪ್ತಿ ಇದೆ. ಮೂರು

ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ 300 ಇತ್ತು. ಈಗ 1,308 ವಿದ್ಯಾರ್ಥಿಗಳು ಇದ್ದಾರೆ. ನ್ಯಾಕ ಸಮಿತಿ ಮೂಲ

ಸೌಕರ್ಯಕ್ಕಾಗಿ ಪಡೆದುಕೊಳ್ಳಲು ಸಲಹೆ ನೀಡಿತ್ತು. ಇದರ ಅನ್ವಯ ರುಸೋ ಅನುದಾನ 20 ಕೋಟಿ

ರೂ.ಒದಗಿಸಲಾಗಿತ್ತು. ಹಾಗಾಗಿ ಪಿ.ಜಿ ತರಗತಿಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಲಾಯಿತು ಎಂದು ಹೇಳಿದರು.

15 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನೀಯರ ನಿಲಯಗಳನ್ನು ತಲಾ ಒದೊಂದು ನಿಲಯಗಳನ್ನು

ನಿರ್ಮಿಸಲಾಗಿದೆ. ಮತ್ತೆ ಒಬಿಸಿ ನಿಲಯಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ

ಬೆಂಗಳೂರುನಲ್ಲಿ 14 ಎಕರೆ ನೀಡಿದೆ. ದೇವದುರ್ಗದಲ್ಲಿ 30 ಎಕರೆ ನೀಡಿದೆ ಎಚಿದರು.

ಕುಲಸಚಿವ ಡಾ.ಅಶೋಕಕುಮಾರ ರಂಜೇರೆ, ಪ್ರಾಧ್ಯಾಪಕರಾದ ಡಾ.ಎ.ಸುಬ್ಬಣ್ಣ ರೈ, ಡಾ.ಸ.ಚಿ.ರಮೇಶ, ಹಣಕಾಸು

ಅಧಿಕಾರಿ ಡಾ.ಸಿದ್ದಗಂಗಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *