ಪ್ರತಿ ಮನೆಗೂ ಮಾಸ್ಕ್ ವಿತರಿಸಿ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಸಂಡೂರು:
ಕುರೇಕುಪ್ಪೆಯಲ್ಲಿ ಕಡು ಬಡವರನ್ನು ಗುರುತಿಸಿ, ಪ್ರತಿ ದಿನ ಬೆಳ್ಳಿಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಬೇಕು ಹಾಗೂ ಪ್ರತಿ ಮನೆಗಳಿಗೆ ಮಾಸ್ಕ್ ಪೂರೈಸಬೇಕೆಂದು ಜಿಂದಾಲ್ ಸಂಸ್ಥೆಯ ವಿಶ್ವನಾಥ್ ಹಾಗೂ ಇನ್ನುಳಿದ ಸಿಬ್ಬಂದಿಗಳಿಗೆ ಶಾಸಕರಾದ ತುಕಾರಾಂ ಅವರು ಸೂಚಿಸಿದರು .

ಕೊರೊನ ವೈರಸ್ ಬಗ್ಗೆ ಮುಂಜಾಗೃತ ಕ್ರಮಕೈಗೊಂಡ ಬಗ್ಗೆ ಕುರೇಕುಪ್ಪ ಪುರಸಭೆ ಸಭಾ ಭವನದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಸಭೆಯಲ್ಲಿ ಸಂಡೂರ ತಹಶೀಲ್ದಾರು, ಕುರೇಕುಪ್ಪ ಪುರಸಭೆ ಸಿಬ್ಬಂದಿ ವರ್ಗ ಹಾಗೂ ಜಿಂದಾಲ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.
ಶಾಸಕರ ಪ್ರಶಂಸೆ ಶ್ರೀ ಬಸವೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹಾಲು ವಿತರಣೆ ಮಾಡಲಾಗಿದೆ. ಪಟ್ಟಣದಲ್ಲಿ ಸೋಡಿಯಂ ಹೈಪೋಕ್ಲೊರೈಟ್ ಸಿಂಪಡಿಸಲು ಹೊಸದಾಗಿ ಮೂರು ಸಾವಿರ ಲೀಟರ್ ಸಿಂಟೆಕ್ಸ್ ಹಾಗೂ ಸಿಂಪಡಿಸುವ ಮೆಷಿನ್ ಖರೀದಿಸಿದ್ದು, ಅಔಗಿIಆ-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಕ್ರಮವಹಿಸಿದ ಬಗ್ಗೆ ಪ್ರಾಜೆಕ್ಟರ್ ಮೂಲಕ ಸಭೆಯಲ್ಲಿ ಶಾಸಕರಿಗೆ ಪುರಸಭೆ ಮುಖ್ಯಾಧಿಕಾರಿಯಾದ ಅಬ್ದುಲ್ ರೆಹಮಾನ್ ಅವರು ಕುಲಂಕುಶವಾಗಿ ಮಾಹಿತಿ ನೀಡಿದರು. ಕಡಿಮೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರಿಗೆ covid-19 ಮುಂಜಾಗೃತ ಕ್ರಮಕೈಗೊಂಡ ಬಗ್ಗೆ ಶಾಸಕರು ಪ್ರಸಂಶೆ ವ್ಯಕ್ತಪಡಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter