ಬಸ್ಸಿನಲ್ಲಿ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಸೋಂಕು ಧೃಡ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಗದಗ
: ಪಣಜಿಯಿಂದ ದಿ. 12-3-2020ರ ರಾತ್ರಿ 8-45 ಕ್ಕೆ ಹೊರಟ ಪಣಜಿ-ಗದಗ ಬಸ್‌ ಸಂಖ್ಯೆ ಕೆಎ- 26-ಈ-962 ಇದರಲ್ಲಿ 30 ಪ್ರಯಾಣಿಕರು ಇದ್ದರು. ಇದರಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದ ವ್ಯಕ್ತಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.

ಅದೇ ಬಸ್ಸಿನ ಮುಂದುವರೆದ ಪ್ರಯಾಣದಲ್ಲಿ ದಿ. 13ರಂದು ಮುಂಜಾನೆ 3-15 ಗಂಟೆಗೆ ಗದಗನಲ್ಲಿ 6, ಅಡವಿ ಸೋಮಾಪುರ ತಾಂಡಾದಲ್ಲಿ 3-30ಕ್ಕೆ 11 ಜನ, ಪಾಪನಾಶಿ ತಾಂಡಾದಲ್ಲಿ 3-45ಕ್ಕೆ 2 ವ್ಯಕ್ತಿಗಳು ಹಾಗೂ ಒಂದು ಮಗು ಮತ್ತು 4-30ಕ್ಕೆ ಸಿಂಗಟ ರಾಯನಕೆರೆ ತಾಂಡಾದಲ್ಲಿ 7ಜನ ಇಳಿದಿದ್ದಾರೆ. ಸದರಿ ಬಸ್ಸಿನ ವಾಹನ ಚಾಲಕ ಹಾಗೂ ನಿರ್ವಾಹಕರು ಈಗಾಗಲೇ ಗದಗ ಜಿಮ್ಸನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ಬಸ್ಸು ಎಕ್ಸಪ್ರೆಸ್‌ ಆಗಿದ್ದು ಪ್ರಯಾಣಿಕರ ಮಾಹಿತಿ ಸಿಗುತ್ತಿಲ್ಲ.

ಆದುದರಿಂದ ಅಂದು ಪಣಜಿಯಿಂದ ಆಗಮಿಸಿದ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ತಕ್ಷಣ ಗದಗ ಜಿಮ್ಸ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದು ಪರೀಕ್ಷೆಗೆ ಒಳಗಾಗಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿರ್ದೇಶನ ನೀಡಿದ್ದಾರೆ. ಈ ಪ್ರಯಾಣಿ ಕರ ಪತ್ತೆಗಾಗಿ ಅಗತ್ಯದ ಕ್ರಮ ಕೈಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter