ಡಿಕೆಶಿ ಬಂಧನ ಖಂಡಿಸಿ, ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಡಿಕೆಶಿ ಬಂಧನ ಖಂಡಿಸಿ, ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ


ಬೆಳಗಾಯಿತು ವಾರ್ತೆ

ಹೊಸಪೇಟೆ : ಕೇಂದ್ರದ ಭ್ರಷ್ಟ ಬಿಜೆಪಿ ಸರ್ಕಾರದ ಇಡಿ ಇಲಾಖೆಯು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ರೋಟರಿ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ.ಪರಮೇಶನಾಯ್ಕ್, ಕೇಂದ್ರದ ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಮುಖಂಡರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ತಮ್ಮದೇ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಮಾಡಿ ಸಾವಿರಾರು ಕೋಟಿ ಕುದುರೆ ವ್ಯಾಪಾರ ಮಾಡುತ್ತಿದ್ದರೂ ಅವರನ್ನು ಸುಮ್ಮನೇ ಬಿಟ್ಟು ಪ್ರತಿ ಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಖಂಡನೀಯ ಎಂದರು.

ಕಂಪ್ಲಿ ಶಾಸಕ ಗಣೇಶ್, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಕೆ.ಎಸ್.ಎಲ್.ಸ್ವಾಮಿ, ಸಿದ್ದನಗೌಡ, ಕೆ.ಎಂ.ಹಾಲಪ್ಪ, ಗುಜ್ಜಲ ನಾಗರಾಜ, ಇಮಾಮ್ ನಿಯಾಜಿ, ಆಶಾಲತಾ ಸೋಮಪ್ಪ, ಆರ್.ಕೊಟ್ರೇಶ್, ಡಿ.ವೆಂಕಟರಮಣ, ನಿಂಬಗಲ್ ರಾಮಕೃಷ್ಣ, ಲಿಯಾಕತ್ ಅಲಿ, ವಿ.ಸೋಮಪ್ಪ, ಬಿ.ಮಾರೆಣ್ಣ, ಅಯ್ಯಾಳಿ ಮೂರ್ತಿ ಸೇರಿದಂತೆ ಇತರರು ಇದ್ದರು.

ಬಳ್ಳಾರಿಯಲ್ಲೂ ಪ್ರತಿಭಟನೆ:
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್, ಎನ್‍ಎಸ್ಯುಐ. ಯೂತ್ ಕಾಂಗ್ರೆಸ್ ಮತ್ತು ಮುಂಚೂಣಿ ಘಟಕಗಳ ವತಿಯಿಂದ ಮಾಜಿ ಸಚಿವರಾದ ಡಿ.ಕೆ ಶಿವಕುಮಾರ್ ಅವರನ್ನು ಇ.ಡಿ ಅರೆಸ್ಟ್ ಮಾಡಿರುವುದು ಹಾಗೂ ಕೇಂದ್ರ ಸರ್ಕಾರ ಇ.ಡಿ ಸಂಸ್ಥೆಯ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಕಮಲ ಮರಿಸ್ವಾಮಿ, ವೆಂಕಟೇಶ್ ಹೆಗಡೆ,ಅಯಜ್ ಅಹ್ಮದ್, ಎಲ್. ಮಾರೆಣ್, ಜೀವೇಶ್ವರಿ,ನಾಗಭೂಷಣ ಗೌಡ ಎಮ್. ಹನುಮಕೀಶೋರ್, ಅಂಸುಂಡಿ ವನ್ನೂರಪ್ಪ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.