ಮರಿಯಮ್ಮನಹಳ್ಳಿ: ಮುಸ್ಲಿಂ ಸಮುದಾಯದವರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ (ಈದ್ ಉಲ್ ದಾವ)ಪಟ್ಟಣದಲ್ಲಿ ಮುಸ್ಲಿಂ ಸಮಾಜದವರು ಶ್ರದ್ದಾಭಕ್ತಿಗಳಿಂದ ಸರಳವಾಗಿ ಆಚರಿಸಿದರು. ತ್ಯಾಗಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬಕ್ಕಾಗಿ ಪ್ರತಿಯೊಬ್ಬರೂ ಹೊಸಬಟ್ಟೆಗಳನ್ನು…
ಮರಿಯಮ್ಮನಹಳ್ಳಿ:ಪಟ್ಟಣದ 7ನೇ ವಾರ್ಡಿನ ಒಂದೇ ಕುಟುಂಬದ ಆರು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟವರಲ್ಲಿ 45 ವರ್ಷದ ಪುರುಷ ಗುರುವಾರ ಬಳ್ಳಾರಿಯ ಕೋವಿಡ್-19 ಆಸ್ಪತ್ರೆಯಲ್ಲಿ ನಿಧನರಾದರು. ಉಸಿರಾಟದ ತೊಂದರೆಯಿಂದ…
ಬಳ್ಳಾರಿ:ಜಿಲ್ಲೆಯಲ್ಲಿ ಸದ್ಯಕ್ಕೆ ನೋ ಲಾಕ್ಡೌನ್; ಲಾಕ್ಡೌನ್ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಈ ಲಾಕ್ಡೌನ್ನಿಂದ ಕೊರೊನಾ ಸೊಂಕಿನ ಹರಡುವಿಕೆಯಲ್ಲಾದ ಪ್ರಮಾಣದಲ್ಲಾದ ಬದಲಾವಣೆಗಳನ್ನು ಪರಿಶೀಲಿಸಿ ನಮ್ಮಲ್ಲಿ ಅದನ್ನು ಜಾರಿಗೆ ತರಬೇಕೇ ಅಥವಾ…
ಮರಿಯಮ್ಮನಹಳ್ಳಿ: ಮನ್ಸೂರ್ ಸುಭದ್ರಮ್ಮರವರು ಓರ್ವನಟಿಯಾಗಿರದೆ,ನಮಗೆಲ್ಲ ಮಾತೃ ಸ್ವರೂಪಿಗಳಾಗಿದ್ದವರು,ಅವರಿಲ್ಲದ ನಾವುಗಳು ಅನಾಥಪ್ರಜ್ಞೆ ಅನುಭವಿಸುವಂತಾಗಿದೆ ಎಂದು ಹಿರಿಯ ರಂಗಕಲಾವಿದೆ ಕೆ.ನಾಗರತ್ನಮ್ಮ ಹೇಳಿದರು. ಅವರು ಪಟ್ಟಣದ ದುರ್ಗಾದಾಸಬಯಲು ರಂಗಮಂದಿರದಲ್ಲಿ, ಲಲಿತಕಲಾರಂಗಹಾಗು ಮಹಿಳಾ…
ಬಳ್ಳಾರಿ: ಕೊರೊನಾ ಸೊಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ ಅವರು ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಸೂರ್ಯನಮಸ್ಕಾರಗಳನ್ನು ಕಲಿಸುವುದರ ಜತೆಗೆ ನೈತಿಕ ಸ್ಥೈರ್ಯ ತುಂಬುವುದರ ಮೂಲಕ ಗಮನಸೆಳೆಯುತ್ತಿದ್ದಾರೆ. ಆತ್ಮಸ್ಥೈರ್ಯವೇ ಸರ್ವಸ್ವ;ಧೈರ್ಯವೇ ಮುಖ್ಯ. ನೊಂದು ಈ ಕೊರೊನಾ ಚಿಕಿತ್ಸೆಗೆ ಸೊಂಕಿತರಾಗಿ ಬರಬೇಡಿ ಪಿಕ್ನಿಕ್ ಅಂತ ತಿಳಿದುಕೊಂಡು ಅರಾಮವಾಗಿ ಬನ್ನಿ;ಏನು ಆಗಲ್ಲ ಬಿ ಹ್ಯಾಪಿಯಾಗಿರಿ ಎಂದು ಹೊಸದಾಗಿ ಬರುವ ಸೊಂಕಿತರಲ್ಲಿ ಹಾಗೂ ಊಟ–ನೀರು ಸೇವಿಸದೇ ಮುಂದೇನು ನಮ್ಮಗತಿ ಅಂತ ಸೊಂಕಿತರ ವಾರ್ಡ್ನಲ್ಲಿ ತಲೆಮೇಲೆ ಕೈಯೆತ್ತಿ ಕುಳಿತವರಿಗೆ ಸ್ಪೂರ್ತಿಯ ಮಾತುಗಳನ್ನಾಡಿ, ಅವರಿಗೆ ಪ್ರತಿನಿತ್ಯ ಬೆಳಗ್ಗೆ ಯೋಗಾಸನದ ವಿವಿಧ ಭಂಗಿಗಳನ್ನು ಕಲಿಸಿಕೊಡುತ್ತಿದ್ದಾರೆ ಮತ್ತು ಸೂರ್ಯನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಡುವುದರ ಜತೆಗೆ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿರುವುದು ವಿಶೇಷ!. ತಾವು ಅಲ್ಪಸಂಖ್ಯಾತ ಸಮುದಾಯದವರಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಮೊದಲು ನಾನು ಭಾರತೀಯ; ನನಗೆ ಯಾವುದೇ ಧರ್ಮವಿಲ್ಲ ಎಂದು ಹೇಳುವ ಚಾಂದಪಾಶಾ ಕಳೆದ 8 ದಿನಗಳಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಯೋಗ ಹಾಗೂ ಸೂರ್ಯನಮಸ್ಕಾರ ಕಲಿಸುವುದರ ಜತೆಗೆ ತನ್ನೊಂದಿಗೆ ಚಿಕಿತ್ಸೆಗೆ ದಾಖಲಾಗಿರುವವರಿಗೆ ಸ್ವತಃ ತನ್ನದೇ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ ತನ್ನ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ದಪಡಿಸಿ 50 ಜನರಿಗೆ ಕುಡಿಸುತ್ತಿದ್ದಾರೆ. 14 ವರ್ಷಗಳಿಂದಲೂ ಈ ರೀತಿಯ ಯೋಗಾಸನ ಮತ್ತು ಸೂರ್ಯನಮಸ್ಕಾರ ಹಾಗೂ ವಿವಿಧ ರೀತಿಯ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿದ್ದೇನೆ. ಈ ಕೊರೊನಾವೇನು ದೊಡ್ಡ ರೋಗವಲ್ಲ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೇವೆ ಎಂದು ತಿಳಿಸುವ ಚಾಂದಪಾಶಾ ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೊರೊನಾ ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಚಾಂದಪಾಶಾ ಅವರು ಇಲ್ಲಿ ದಾಖಲಾಗಿನಿಂದ ಇಲ್ಲಿಯವರೆಗೆ ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಹಾಗೂ ಸೂರ್ಯನಮಸ್ಕಾರ ಕಲಿಸಿಕೊಡುತ್ತಿದ್ದಾರೆ. ಆಗಾಗ ಸಂಸ್ಕøತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಜೊತೆಗೆ ಇಲ್ಲಿರುವ ಎಲ್ಲರಿಗೂ ತನ್ನ ಕೈಯಾರೇ ಕಷಾಯ ತಯಾರು ಮಾಡಿ ಒದಗಿಸುತ್ತಿದ್ದಾರೆ.ಇಲ್ಲಿ ದಾಖಲಾಗಿರುವ ಎಲ್ಲರಿಗೂ ಆತ್ಮಸ್ಥೈರ್ಯದ ಮಾತುಗಳನ್ನಾಡುವ ಮೂಲಕ ಅವರನ್ನು ಚಿಂತೆಯಿಂದ ವಿಮುಕ್ತಿ ಮಾಡಿಸಿ ಅವರನ್ನು ಸಂತೋಷದಿಂದ ಇರುವಂತೆ ಮಾಡುತ್ತಿದ್ದಾರೆ. ನಿಜಕ್ಕೂ ಈ ವ್ಯಕ್ತಿ ಅದ್ಭುತಸ್ಪೂರ್ತಿ ನಮಗೆಲ್ಲರಿಗೂ ಎಂದು ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಅವರು ಸಂತಸ ವ್ಯಕ್ತಪಡಿಸುತ್ತಾರೆ. ಚಾಂದಪಾಶಾ ಅವರು ವಿವಿಧ ಯೋಗಾಸನದ ಭಂಗಿಗಳ ವಿಡಿಯೋ ಗಮನಿಸಿದೆ ಹಾಗೂ ಅವರಾಡುವ ಸ್ಪೂರ್ತಿಯುತ ಮಾತುಗಳನ್ನ ಆಲಿಸಿದೆ ತುಂಬಾ ಸಂತೋಷವಾಯ್ತು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು. –ವಿಶೇಷ ವರದಿ ರಾಮಲಿಂಗಪ್ಪ ಬಿ.ಕೆ ಹಿರಿಯ ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಖೆ ಬಳ್ಳಾರಿ
ಬಳ್ಳಾರಿ: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಸೊಂಕಿತ ರೋಗಿಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಇದೇ ಜುಲೈ 21 ರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಎಲ್ಲಾ ವಿಭಾಗಕ್ಕೆ ಸಂಬಂಧಿಸಿದ ಹೊರರೋಗಿಗಳ ಚಿಕಿತ್ಸೆಯನ್ನು ನೀಡಲಾಗುವುದು ಹಾಗೂ ಮಧ್ಯಾಹ್ನ 2 ರಿಂದ 4ರ ವರೆಗೆ ಚಿಕಿತ್ಸೆ ಸೇವೆಯನ್ನು ತಾತ್ಕಲಿಕವಾಗಿ ರದ್ದುಪಡಿಸಲಾಗಿದೆ ಎಂದು ವಿಮ್ಸ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕಗಳಲ್ಲಿ ಈ ಹಿಂದಿನಂತೆ ದಿನದ 24ಗಂಟೆಗಳ ಕಾಲ ಸೇವೆ ದೊರೆಯಲಿದೆ ಆದ ಕಾರಣ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ: ನೀವು ಜ್ವರ,ಗಂಟಲು ನೋವು, ಕೆಮ್ಮು,ನೆಗಡಿಯಿಂದ ಬಳಲುತ್ತಿದ್ದಿರಾ?ಹಾಗಾದರೆ ಭಯ ಪಡುವ ಅಗತ್ಯವಿಲ್ಲ, ಎಚ್ಚರದಿಂದಿರಿ ಮತ್ತು ಆ ರೀತಿಯ ಲಕ್ಷಣಗಳಿದ್ದಲ್ಲಿ ಸ್ವಯಂವರದಿ ಮಾಡಿಕೊಳ್ಳಿ. ಕೊರೊನಾ ಸೋಂಕು ಇದ್ದರೂ ಇರಬಹುದು.…
ಮರಿಯಮ್ಮನಹಳ್ಳಿ:ಕೋವಿಡ್-19 ಕೊರೋನಾ ವೈರಸ್ ನಭೀತಿಯ ಹಿನ್ನೆಲೆಯಲ್ಲಿ,ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ(ನಮಾಜ್) ಮಾಡದೆ ಮನೆಯಲ್ಲಿಯೇ ಸಾಮಾಜಿಕ ಅಂತರಕಾಯದು ಕೊಂಡು ಪ್ರಾರ್ಥನೆ ಮಾಡಬೇಕೆಂದು ಪಟ್ಟಣದ ಪಿ.ಎಸ್.ಐ.ಶಿವಕುಮಾರ ಮುಗ್ಗಳ್ಳಿ…