ಬಳ್ಳಾರಿ ಆರ್ ಟಿ ಓ ರೇಡ್

ಬೆಳಗಾಯತು ವಾರ್ತೆ

ಬಳ್ಳಾರಿ: ಪ್ರವಾಸಿ ಟ್ಯಾಕ್ಸಿಗಳಿಗೆ ಚೈಲ್ಡ್ ಲಾಕ್ ಇರಕೂಡದು ಅಂತಾ ಹೈಕೋರ್ಟ್ ಆದೇಶ ನೀಡಿದೆ.

ಅದರ ಹಿನ್ನಲೆ ಬಳ್ಳಾರಿಯ ಆರ್ ಟಿ ಓ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ನಗರದ ಅನೇಕ ಟ್ರಾವೆಲ್ಸ್ ಸಂಸ್ಥೆಗಳಿಗೆ ಸೇರಿದ ಕ್ಯಾಬ್ ಹಾಗೂ ಟ್ಯಾಕ್ಸಿಗಳನ್ನ ಪರಿಶೀಲನೆ ನಡೆಸಿದ ಅಧಿಕಾರಿಗಳು

ಹಿಂಬದಿ ಬಾಗಿಲಿನ ಚೈಲ್ಡ್ ಲಾಕ್ ಗಳನ್ನು ತೆಗೆದು  ಹಾಕಿದ್ದಾರೆ.

ಏ ಆರ್ ಟಿ ಓ ಮೂರ್ತಿ ರವಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಾನ್ಯ ಹೈಕೋರ್ಟ್ ಈ ಆದೇಶವನ್ನ ನೀಡಿದೆ.

ಹಳದಿ ನಂಬರ್ ಪ್ಲೇಟ್ ಇರುವ ಎಲ್ಲ ಪ್ರವಾಸಿ ಕ್ಯಾಬ್ ಹಾಗೂ ಟ್ಯಾಕ್ಸಿಗಳನ್ನ ಪರಿಶೀಲನೆ ನಡೆಸಿದ ಆರ್ ಟಿ ಓ ಅಧಿಕಾರಿಗಳು ಚೈಲ್ಡ್ ಲಾಕ್ ಗಳನ್ನು ತೆಗೆದು ಹಾಕಿದ್ದಾರೆ.

Leave a Reply

Your email address will not be published. Required fields are marked *