ಬಳ್ಳಾರಿ: ಅಂತರರಾಜ್ಯ ಚೆಕ್‍ಪೋಸ್ಟ್ ಬಳಿ ತೀವ್ರ ತಪಾಸಣೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಕರೋನಾ ರೋಗ ಸಾಂಕ್ರಮಿಕವಾಗಿ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತ ಕ್ರಮವಾಗಿ ಜಿಲ್ಲೆಗೆ ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ವಾಹನಗಳಲ್ಲಿನ ಜನರನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 11 ಅಂತರರಾಜ್ಯ ಚೆಕ್‍ಪೋಸ್ಟ್‍ಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ತೀವ್ರ ತಪಾಸಣೆ ಮಾಡಲಾಗುತ್ತಿದೆ.
ಚೆಕ್‍ಪೋಸ್ಟ್‍ಗಳಲ್ಲಿ ಹೊರರಾಜ್ಯಗಳಿಂದ ಬರುವ ಜನರ ವಾಹನಗಳನ್ನು ತಡೆಹಿಡಿದು ಅವುಗಳ ನಂಬರ್ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಜಿಲ್ಲೆಯ ಒಳಗಡೆ ಬರುತ್ತಿರುವ ಕಾರಣ ಹಾಗೂ ಅವರಲ್ಲಿ ಯಾರಿಗಾದರೂ ಅನಾರೋಗ್ಯವಿದೆಯೇ ಎಂದು ಪರಿಶೀಲಿಸುವ ಕಾರ್ಯ ನಡೆದಿದೆ. ಅನಗತ್ಯವಾಗಿ ಜಿಲ್ಲೆಗೆ ಬರುವುದು ಕಂಡುಬಂದಲ್ಲಿ ಚೆಕ್‍ಪೋಸ್ಟ್ ಬಳಿಯೇ ಅಂತವರನ್ನು ನಿಷೇಧಿಸಿ ವಾಪಸ್ ಕಳುಹಿಸಲಾಗುತ್ತಿದೆ. ಜಿಲ್ಲೆಯಿಂದ ಹೊರಹೋಗುವವರನ್ನು ಸಹ ಯಾವ ಕಾರಣಕ್ಕಾಗಿ ಹೋರಹೋಗಲಾಗುತ್ತಿದೆ; ಮತ್ತೇ ಮರಳಿ ಬಂದರೇ ಜಿಲ್ಲೆಯೊಳಗೆ ಪ್ರವೇಶವಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ಹೊರಬಿಡಲಾಗುತ್ತಿದೆ.

ಹಲಕುಂದಿ ಚೆಕ್‍ಪೋಸ್ಟ್‍ಗೆ ಎಸ್ಪಿ, ಎಎಸ್ಪಿ ಭೇಟಿ ಪರಿಶೀಲನೆ: ಬಳ್ಳಾರಿ ಸಮೀಪದ ಹಲಕುಂದಿ ಬಳಿ ಸ್ಥಾಪಿಸಲಾಗಿರುವ ಅಂತರರಾಜ್ಯ ಚೆಕ್‍ಪೋಸ್ಟ್‍ಗೆ ಎಸ್ಪಿ ಸಿ.ಕೆ.ಬಾಬಾ ಹಾಗೂ ಎಎಸ್ಪಿ ಬಿ.ಎನ್.ಲಾವಣ್ಯ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆಕ್‍ಪೋಸ್ಟ್ ಬಳಿಯ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು ಮತ್ತು ಪೊಲೀಸರ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದ ಅವರು ಇದೇ ಸಂದರ್ಭದಲ್ಲಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಸಿ.ಕೆ.ಬಾಬಾ ಅವರು ಕೋವಿಡ್-19 ಹಿನ್ನೆಲೆ ಜಿಲ್ಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ. ಜನರು ತಮ್ಮ ತಮ್ಮ ಮನೆಯಲ್ಲಿಯೇ ಉಳಿಯುವುದರ ಮೂಲಕ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಎಲ್ಲೆಲಿ ಚೆಕ್‍ಪೊಸ್ಟ್: ಹಲಕುಂದಿ, ಎತ್ತಿನಬೂದಿಹಾಳ್, ರೂಪನಗುಡಿ, ಸಿಂಧವಾಳ, ಜೋಳದರಾಶಿ, ಯರ್ರಗುಡಿ, ಇಬ್ರಾಹಿಂಪುರ, ಇಟಗಿಹಾಳ್, ಕೆ.ಬೆಳಗಲ್ಲು, ವತ್ತುಮುರಣಿ, ಮಾಟಸೂಗುರು
11 ಚೆಕ್‍ಪೋಸ್ಟ್‍ಗಳಲ್ಲಿ ನೆರಳು, ಕುಡಿಯುವ ನೀರು, ವಿದ್ಯುತ್, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಯ 99 ಸಿಬ್ಬಂದಿಗಳನ್ನು ದಿನದ 24ಗಂಟೆ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter