ಬಳ್ಳಾರಿ: ಕೊರೋನಾ ರೂಮರ್ ಗಳಿಗೆ ಕಿವಿಗೊಡಬೇಡಿ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಕೊರೊನಾ ವೈರಸ್ ಭೀತಿ ಒಂದು ಕಡೆಯಾದರೇ ಇನ್ನೊಂದೆಡೆ ಜನರನ್ನು ಮತ್ತಷ್ಟು ಬೆದರಿಸುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಜನರಲ್ಲಿ ಭಯವನ್ನು ಹುಟ್ಟಿಸಿರುವ ಮಾರಕ ಸೋಂಕಿನ ಬಗ್ಗೆ ಸುಳ್ಳು ವದಂತಿಗಳನ್ನು ಹರಿಬಿಡಲಾಗುತ್ತಿದೆ.

ಬಳ್ಳಾರಿ ನಗರದ ಕಪ್ಪಗಲ್ ರಸ್ತೆ, ಮಿಲ್ಲರ್ ಪೇಟೆ, ಬಸವೇಶ್ವರ ನಗರ ಸೇರಿದಂತೆ ವಿವಿಧೆಡೆ ವಿಧೇಶದಿಂದ ಬಂದಿರುವ ಐದು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ಮೇಲೆ ತಿಳಿಸಿರುವ ಪ್ರದೇಶ ಹಾಗೂ ಒಟ್ಟಾರೆ ನಗರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಈ ಸಂದೇಶ ಸುಳ್ಳಾಗಿದ್ದು, ಇಂತವರ ವಿರುದ್ದ ಕಠಿಣ ಕ್ರಮದ ಅವಶ್ಯಕವಿದೆ. ಈ ಐವರು ವ್ಯಕ್ತಿಗಳು ವಿದೇಶದಿಂದ ಬಂದಿದ್ದು ಸ್ವಯಂಪ್ರೇರಿತರಾಗಿ ಕೊರೋನಾ ಪರಿಶೀಲನೆಗೆ ಒಳಪಟ್ಟಿದ್ದಾರೆ. ಇದುವರೆಗೆ(ಮಾ.24- 3 ಗಂಟೆಯವರೆಗೆ) ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಬಳ್ಳಾರಿಯಲ್ಲಿ ದಾಖಲಾಗಿಲ್ಲ.

ಬುಲೆಟಿನ್‍ಗೆ ಸಂಪರ್ಕಿಸಿ: ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಗಾಗಿ ಜಿಲ್ಲಾಡಳಿತ ballari.nic.in ಹಾಗೂ ಕೊರೋನಾ ದೈನಂದಿನ ಅಪಡೇಟ್ಸ್ ಮಾಹಿತಿಯುಕ್ತ ಲೇಖನಗಳಿಗಾಗಿ corona.belagayithu.com ಲಿಂಕ್‍ಅನ್ನು ಸಂಪರ್ಕಿಸಿ. ಬಳ್ಳಾರಿಯಲ್ಲಿ ಕೊರೋನಾ ಸಂಬಂಧಿತ ನೈಜ, ಮಾಹಿತಿಯುಕ್ತ ಹಾಗೂ ಜಾಗೃತಿ ಮೂಡಿಸುವ ಸುದ್ದಿ, ಲೇಖನಗಳಿಗಾಗಿ ಬಳ್ಳಾರಿ ಬೆಳಗಾಯಿತು ಪತ್ರಿಕೆಯನ್ನು ಓದಿ.

ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ಇಲ್ಲ
ಬಳ್ಳಾರಿಯಲ್ಲಿ ಇದುವರೆಗೂ 19 ಶಂಕಿತ ವ್ಯಕ್ತಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದೂ, ಅದರಲ್ಲಿ 16 ಮಾದರಿಗಳು ನೆಗಟಿವ್ ಆಗಿದೆ. ಇನ್ನೂ ಮೂರರ ಫಲಿತಾಂಶ ಬರಬೇಕಿದ್ದೂ, ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಬಳ್ಳಾರಿಯಲ್ಲಿ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ನÀಕುಲ್‍ರವರು ತಿಳಿಸಿದ್ದಾರೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿರುವ ಅವರು, ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಬೆಳಗಾಯಿತು ಪತ್ರಿಕೆಗೆ ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter