ಗುಳೆ ಹೋದವರಿಗೆ ತಪಾಸಣೆ ನಂತರ ಊರೊಳೆಗೆ ಪ್ರವೇಶ :ಗ್ರಾಮಕ್ಕೆ ಮುಳ್ಳು ಬೇಲಿ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿಿ:
ವಿವಿಧೆಡೆ ಕಾರ್ಯ ನಿಮಿತ್ತ ವಲಸೆ ಹೋಗಿದ್ದವರನ್ನು, ಜಿಲ್ಲಾಾ ಕೊವಿಡ್ ತಂಡವು ತಪಾಸಣೆ ನಡೆಸಿದೆ. ಪಟ್ಟಣ ಸೇರಿದಂತೆ ವಿವಿಧ ಗ್ರಾಾಮಗಳು, ತಾಂಡಗಳಿಗೆ ವಾಪಾಸಾದವರನ್ನು ತಪಾಸಣೆ ನಡೆಸಿದ, ತಂಡದ ವೈದ್ಯಾಾಧಿಕಾರಿಗಳು ತಪಾ ಸಣೆಗೆ ಒಳಗಾದವ ರೆಲ್ಲರೂ ಆರೋಗ್ಯ ವಾಗಿದ್ದಾರೆ.

ಇವರಲ್ಲರು ಹದಿನಾಲ್ಕು ದಿನಗಳಕಾಲ ಮನೆಯಿಂದ ಹೊರಬಾರದಿರಲು ಸೂಚಿಸಲಾ ಗಿದೆ ಎಂದು ತಿಳಿಸಿದರು. ಪಟ್ಟಣಕ್ಕೆೆ ಮರಳಿದ ಹಾಗು ಮರಿಯಮ್ಮನಹಳ್ಳಿಿ ತಾಂಡದ ಕಬ್ಬು ಕಟಾವಿಗೆ ತೆರಳಿ ಮರಳಿದ ಒಟ್ಟು80 ಅಧಿಕಜನರಿಗೆ ತಪಾಸಣೆಗೆ ಒಳಪಡಿಸಲಾಯಿತು. ಇಂದು ಬೆಳಿಗ್ಗೆೆ ಗುಂಡಾ ತಾಂಡದ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚಿಿನವರು ನಂಜನ ಗೂಡು ಬಳಿಯ ಹುಲ್ಲ್ಯಾಳಕ್ಕೆೆ ಕಬ್ಬು ಕಟಾವಿಗೆ ತೆರಳಿ, ಮರಳಿ ಬಂದ ಇವರನ್ನು ಗ್ರಾಾಮಸ್ಥರು ಗ್ರಾಾಮದೊಳಗೆ ಬಿಟ್ಟು ಕೊಳ್ಳದೆ,ಗ್ರಾಾಮದ (ತಾಂಡ)ದ ಪ್ರವೇಶದಲ್ಲಿ ಉಳಿಸಿದ್ದರು . ಆರೋಗ್ಯ ಇಲಾಖೆಯ ತಂಡವು ಗ್ರಾಾಮಸ್ಥರ ಸಮ್ಮುಖ ದಲ್ಲಿ ಗುಳೆಹೋಗಿಬ ಂದವರನ್ನು ತಪಾಸಿಸಿದ ನಂತರ ತಾಂಡದಲ್ಲಿ ಪ್ರವೇಶಿಸಲು ಅವಕಾಶ ಕಲ್ಪಿಸಿದರು. ಅದೇರೀತಿ ಹಾರುವನಹಳ್ಳಿ, ಗುಂಡಾ ಗ್ರಾಮ, ಗಾಳೆಮ್ಮನ ಗುಡಿ, ಬ್ಯಾಲಕುಂದಿ, ನಾಗಲಾ ಪುತಾಂಡ ಸೇರಿದಂತೆ ವಿವಿಧ ಗ್ರಾಾಮಗಳು, ತಾಂಡಗಳಿಗೆ ಹೊರಜಿಲ್ಲೆಗಳಿಂದ ಮರಳಿದ ವರಿಗೆ ತಪಾಸಿಸಲು ಗ್ರಾಾಮಸ್ಥರು ಒತ್ತಾಾಯಿ ಸಿದ್ದರು.ಅಲ್ಲದೇ ಡಣಾಪುರ ಹಾಗು ತಿಮ್ಮಲಾಪುರ, ಹಾರುವನಹಳ್ಳಿ ಗ್ರಾಾಮಗಳಿಗೆ ಗ್ರಾಮಸ್ಥರು ಮುಳ್ಳು ಬೇಲಿಹಾಕಿ ಹೊರಜನ ಗ್ರಾಮದೊಳಗೆ ಪ್ರವೇಶ ಮಾಡದಂತೆ ತಡೆದಘಟನೆಗಳು ನಡೆದವು.ಅಲ್ಲದೇ ಕೇರಳ, ಮೈಸೂರು, ಬೆಂಗಳೂರಿನಿಂದ ಮರಳಿದವರನ್ನು ಕೂಡ ಸಾರ್ವಜನಿಕರು ದೂರಿನಮೇರೆಗೆ ತಪಾಸಿ ಸಲಾಗಿದೆ,ಅವರು ಹದಿನಾಲ್ಕು ದಿನಗಳಕಾಲ ಎಲ್ಲೂ ಹೊರಗಡೆ ಸಂಚರಿಸದಂತೆ ಸೂಚಿಸಲಾ ಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು. ಡಾ.ನಾಗೇಂದ್ರ ಪಟ್ಟಣದ ವಿವಿಧ ಆಸ್ಪತ್ರೆೆಗಳಿಗೆ ಭೇಟಿನೀಡಿ ಪರಿಶೀಲಿಸಿದರು.

ಈ ಸಂಧರ್ಭ ದಲ್ಲಿ ಪಟ್ಟಣದ ಪಿ.ಎಸ್.ಐ. ಎಂ.ಶಿವಕುಮಾರ, ವೈದ್ಯಾಾ ಧಿಕಾರಿ ಡಾ.ಮಂ ಜುಳಾ, ಡಾ.ದಿಲೀಪ ರಾಜ, ಡಾ.ಬದರಿ ನಾರಾಯಣ ,ಡಾ.ಪ್ರವೀಣ ನಾಯ್ಕ, ಡಾ.ಆನಂದ, ಪ್ರಸನ್ನ,ನಾರಾಯಣ, ಡಿ.ಬಿ. ತಳವಾರ, ಜಯಣ್ಣ ಇತರರು ತಪಾಸಣೆ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.

ಎಂದಿನಂತೆ ಪಟ್ಟಣ ಪಂಚಾ ಯತಿಯ ಪೌರಕಾಮಿ ಕರ್ರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದರು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ಬೀದಿಬೀದಿ ಗಳಲ್ಲಿ ಗಸ್ತುತಿರುಗುವುದು ಕಂಡು ಬಂತು. ಇದರಿಂದ ಬಹುತೇಕರುಮನೆಗಳಿಂದ ಹೊರಬಾರದೆ ಉಳಿದು ಕೊಂಡರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter