ಟ್ರಾಕ್ಟರ್ ಗೆ ಬಸ್ ಡಿಕ್ಕಿ : ಮೂವರು ಕಾರ್ಮಿಕರ ಸಾವು

ಬೆಳಗಾಯಿತು ವಾರ್ತೆ
ಮರಿಯಮ್ಮನಹಳ್ಳಿ : ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕೆಲಸಕ್ಕೆ0ದು ತೆರಳುತ್ತಿದ್ದ ಕಾರ್ಮಿಕರಿದ್ದ ಟ್ರಾಕ್ಟರ್ ಗೆ ಬಸ್ ಡಿಕ್ಕಿ ಹೊಡೆದಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು , ಚಿಕಿತ್ಸೆಗಾಗಿ ಆಸ್ಪತ್ರೆೆಗೆ ಸಾಗಿಸುವಾಗ ಮಾರ್ಗಮದ್ಯೆೆ ಒಬ್ಬರುಸಾವನ್ನಪ್ಪಿದ ಭೀಕರ ಘಟನೆ ಬೆಳಗಿನಜಾವ ನಡೆದಿದೆ .

       ಪಟ್ಟಣದ ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿಯ ಕೆ.ಕೆ. ಕೋಳಿಫಾರಂ ಬಳಿ ರಾಷ್ಟ್ರೀಯ ಹೆದ್ದಾಾರಿ 50ರಲ್ಲಿ ನಡೆದಿದೆ .ಚಿಲಕನಹಟ್ಟಿಿ ಗ್ರಾಾಮದಿಂದ 30 ಜನ ಖಾತ್ರಿ ಕೂಲಿ ಕಾರ್ಮಿಕರು ಬಸವನ ದುರ್ಗಾ ಕೆರೆಯಲ್ಲಿ ಖಾತ್ರಿ ಕೆಲಸಕ್ಕೆ0ದು ಟ್ರಾಕ್ಟರ್ ನಲ್ಲಿ ತೆರಳುವಾಗ ಕೆ.ಕೆ.ಕೋಳಿ ಫಾರಂ ಬಳಿ ಟ್ರಾಾಕ್ಟರ್ ಚಾಲಕ ಯಾವುದೇ ಮೂನ್ಸೂಚನೆ ನೀಡದೆ ಕೆರೆಗೆ ಹೋಗಲು ಬಲಗಡೆಗೆ ಟ್ರಾಾಕ್ಟರ್ ತಿರುಗಿಸಿದಾಗ , ಬೆಂಗಳೂರಿನಿಂದ ಗಂಗಾವತಿಗೆ ಅತಿವೇಗವಾಗಿ , ಚಾಲಕನ ನಿರ್ಲಕ್ಷ್ಯ ತನದಿಂದ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಟ್ರಾಾಕ್ಟರ್ ನ ಟ್ರೇಲರ್ ನ ಎಡಗಡೆ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಟ್ರಾಾಕ್ಟರ್ ನ ಟ್ರೇಲರ್ ಪಲ್ಟಿಿಯಾಗಿದ್ದರಿಂದ ಟ್ರಾಾಕ್ಟರ್ ನಲ್ಲಿದ್ದ 30 ಜನರಲ್ಲಿ ಚಿಲಕನಹಟ್ಟಿ ಗ್ರಾಮದ ರೇಣುಕಮ್ಮ (35) ಮತ್ತು ಅದೆಗ್ರಾಮದ ಯರಿಸ್ವಾಾಮಿ (28) ರವರಿಗೆ ತಲೆಗೆ , ಕೈ.ಕಾಲುಗಳಿಗೆ ತೀವ್ರಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿಿದ್ದಾಾರೆ . ಇನ್ನುಳಿದ 28 ಗಾಯಾಳುಗಳನ್ನು ಚಿಕಿತ್ಸೆೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ , ತೀವ್ರ ಗಾಯಗೊಂಡ 17 ಗಾಯಾಳುಗಳನ್ನ ಹೆಚ್ಚಿಿನ ಚಿಕಿತ್ಸೆಗಾಗಿ ಬಳ್ಳಾಾರಿಯ ವಿಮ್ಸ ಗೆ ಸಾಗಿಸುವ ವೇಳೆ ಮಲ್ಲಮ್ಮ (45) ಮಾರ್ಗದ ಮದ್ಯೆ ಸಾವನ್ನಪ್ಪಿದರು .

   ಟ್ರಾಕ್ಟರ್ ಚಾಲಕ ಕೋರಿಬಾಬು ಹಾಗು ಬಸ್ ಚಾಲಕ ಮಲ್ಲಯ್ಯರವರ ಮೇಲೆ ಗಾಯಾಳು ವೈ.ಕೆ.ಶಿವಣ್ಣ ನೀಡಿದ ದೂರಿನಮೇರೆಗೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ . ಸ್ಥಳಕ್ಕೆ ಜಿಲ್ಲಾಾ ಹೆಚ್ಚು ವರಿ ಎಸ್ಪಿ ಲಾವಣ್ಯ , ಸಂಡೂರು ಸಿ.ಪಿ.ಐ.ಕುಮಾರ್ ಭೇಟಿನೀಡಿದ್ದರು . ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಮೃತರಕುಟುಂಬಗಳಿಗೆ , ಗಾಯಾಳುಗಳು ಚಿಕಿತ್ಸೆೆ ಪಡೆಯುತ್ತಿದ್ದ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು .ಅಲ್ಲದೇ ಮೃತರ ದರ್ಶನ ಪಡೆದು ,ಮೃತಸಂಬಂದಿಗಳಿಗೆ ಸಾಂತ್ವಾಾನ ಹೇಳಿದರು . ಮೃತರಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತು .

Leave a Reply

Your email address will not be published. Required fields are marked *