ಗಾಂಧೀಜಿ ಕಂಡ ದುಶ್ಚಟ ಮುಕ್ತ ಸಮಾಜ ನಿರ್ಮಿಸೋಣ

Share on facebook
Share on twitter
Share on linkedin
Share on whatsapp
Share on email

ಜನ ಜಾಗೃತಿ ಜಾಥಾ,ವ್ಯಸನ ಮುಕ್ತರ

•      ಸಮಾವೇಶ,ದುಶ್ಚಟಗಳಿಂದ ದುಃಖಗಳು ದುಪ್ಪಟ್ಟು!

ಬೆಳಗಾಯಿತು ವಾರ್ತೆ

ಮಾನ್ವಿ, ಃ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ಆಶಯದಂತೆ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಮುಂದಾಗುವ ಮೂಲಕ ಗಾಂಧಿ ಕನಸನ್ನು ನನಸಾಗಿಸೋಣ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಧ್ಯಾನಮಂದಿರ ಅವರಣದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಜನ ಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದ ಸ್ವಾತಂತ್ರಕ್ಕಾಗಿ ಸತ್ಯ, ಆಹಿಂಸೆ, ಅನೇಕ ಚಳುವಳಿಗಳು ಹಾಗೂ ಸಮಾಜದ ಬದಲಾವಣೆಗಾಗಿ ಸ್ವಚ್ಛ ಭಾರತ, ಮದ್ಯ ಮುಕ್ತ ಸಮಾಜಕ್ಕಾಗಿ ಕರೆ ನೀಡಿದ ಗಾಂಧೀಜಿಯ ಸಂದೇಶದ ಜೀವನ ನಮಗೆಲ್ಲಾ ಆದರ್ಶವಾಗಿದೆ.

1992 ರಲ್ಲಿ ಡಾ.ವಿರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಪ್ರಾರಂಭಿಸಿ ಸಾಮಾಜಿಕವಾಗಿ ಕುಟುಂಬಗಳನ್ನು ಆರ್ಥಿಕವಾಗಿ ಬಲಪಡಿಸಲು ಮತ್ತು ಯುವ ಜನತೆ, ವಿದ್ಯಾರ್ಥಿಗಳನ್ನು ಮಾದಕ ವ್ಯಸನ ಮುಕ್ತರನ್ನಾಗಿಸಲು ಸಮಾಜ ಮತ್ತು ಆರೋಗ್ಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ನಾಡಿನ ಯಶಸಿಗೆ ಶ್ರಮಿಸುತ್ತಿರುವುದು ಅವಿಸ್ಮರಣೀಯ ಎಂದು ರಾಜಾ ವೆಂಕಟಪ್ಪನಾಯಕ ತಿಳಿಸಿದರು.

ಡಾ.ವಿರೇಂದ್ರ ಹೆಗ್ಗಡೆ ಸ್ಥಾಪಿತ ಗ್ರಾಮಾಭಿವೃದ್ದಿ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಮನಾಗಿ ಆರ್ಥಿಕವಹಿವಾಟನ್ನು ನಡೆಸುವ ಮೂಲಕ ಲಕ್ಷಾಂತರ ಕುಟುಂಬಗಳ ಬದುಕಿಗೆ ಆಸರೆ ನೀಡಿದ್ದಾರೆ.

ಈ ಸಂಸ್ಥೆಯಲ್ಲಿ ಸಾಲದ ಸಹಾಯ ಪಡೆದುಕೊಳ್ಳುವ ಸ್ವಸಹಾಯ ಗುಂಪುಗಳು ನಿಮ್ಮ ಕುಟುಂಬದ ಆರ್ಥಿಕ ಪ್ರಗತಿ ಜೊತೆಗೆ ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸಂಸ್ಥೆಯ ಅಭಿವೃದ್ದಿಗೆ ಕಾರಣರಾಗಬೇಕೆಂದರು.

ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಶಿಕಲಾ ಭೋವಿ, ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಮಾತನಾಡಿದರು. ವ್ಯಕ್ತಿತ್ವ ವಿಕಸನ ತರಬೇತುದಾರ ಗಿರಿಧರ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು.

ಸರ್ಕಾರಕ್ಕೆ ಜನ ಜಾಗೃತಿ ವೇದಿಕೆಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮದ್ಯ ವ್ಯಸನ ಮುಕ್ತರಾದವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಮಹಾಂತೇಶ, ಶಾಲಿನಿ, ವೆಂಕಟೇಶ ಬಾಗಲವಾಡ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.

ಜಾಥಾ ಃ

ಶ್ರೀಮಹರ್ಷಿ ವಾಲ್ಮೀಕಿ ವೃತ್ತದಿಂದ ಧ್ಯಾನಮಂದಿರದವರಗೆ ಜನಜಾಗೃತಿ ವೇದಿಕೆಯಿಂದ ಬೃಹತ್ ಜಾಗೃತಿ ಜಾಥಾ ನಡೆಯಿತು.

ವೇದಿಕೆ ಮೇಲೆ ಆಸೀನರಾದ ಮುಖ್ಯ ಅತಿಥಿಗಳು

ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಬಸವ ನೀರಮಾನ್ವಿ, ಎಪಿಎಂಸಿ ಸದಸ್ಯ ಹನುಮೇಶ ಮದ್ಲಾಪುರು, ಜೆಡಿಎಸ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಕ್ಷೇತ್ರ ಯೋಜನಾಧಿಕಾರಿ ಪಾಂಡುಗೌಡ, ಸಂಯೋಜಕರಾದ ಸಾಯಿಬಾಬಾ, ಗಂಗಾಧರ, ಮಲ್ಲಿಕಾರ್ಜುನ

ಮದ್ಯ ವ್ಯಸನಿಗಳ ಮನ ಪರಿವರ್ತನೆ ಹಾಗೂ ಸೂಕ್ತ ಚಿಕಿತ್ಸೆ ಮತ್ತು ವಿಶೇಷ ಶಿಬಿರಗಳನ್ನು ಕೈಗೊಂಡು ನವಜೀವನ ಕಲ್ಪಿಸಲು ಮುಂದಾಗುತ್ತಿರುವ ಜನ ಜಾಗೃತಿ ವೇದಿಕೆ ಕಾರ್ಯ ಪ್ರಶಂಸನೀಯ – ರಾಜಾ ವೆಂಕಟಪ್ಪ ನಾಯಕ, ಶಾಸಕ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter