ಏಕತಾ ಪ್ರತಿಮೆಗೆ ಎಚ್.ಡಿ.ದೇವೇಗೌಡ ಭೇಟಿ : ಮೋದಿ ಪ್ರಶಂಸೆ

ಏಕತಾ ಪ್ರತಿಮೆಗೆ ಎಚ್.ಡಿ.ದೇವೇಗೌಡ ಭೇಟಿ : ಮೋದಿ ಪ್ರಶಂಸೆ

ನವದೆಹಲಿ : ಗುಜರಾತ್‍ನ ಕೆವಡಿಯಾದಲ್ಲಿ ನಿರ್ಮಿಸಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಏಕತಾ ಪ್ರತಿಮೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ.

ನಮ್ಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಜಿ ಅವರು ಯುನಿಟಿ ಪ್ರತಿಮೆಗೆ ಭೇಟಿ ನೀಡಿರುವುದು ತಮಗೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‍ನ ಸರ್ದಾರ್ ಸರೋವರ್ ಅಣೆಕಟ್ಟಿನಲ್ಲಿರುವ ಯುನಿಟಿ ಪ್ರತಿಮೆಗೆ ಭೇಟಿ ನೀಡಿದ್ದೆ ಎಂದು ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದರು. ಮಾತ್ರವಲ್ಲ ಬೃಹತ್ ಪ್ರತಿಮೆಯ ಮುಂದೆ ನಿಂತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಇದಾಗಿದ್ದು, ಒಟ್ಟು 182 ಮೀಟರ್ ಎತ್ತರವಿದೆ. ವಡೋದರಾದಿಂದ 100 ಕಿಲೋಮೀಟರ್ ದೂರದಲ್ಲಿರುವ ಕೆವಾಡಿಯ ನರ್ಮದಾ ನದಿಯ ಸರ್ದಾರ್ ಸರೋವರ್ ಅಣೆಕಟ್ಟು ಮುಂದಿನ ನದಿ ದ್ವೀಪದಲ್ಲಿ ನೆಲೆಗೊಂಡಿರುವ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31, 2018 ರಂದು ಸರ್ದಾರ್ ಪಟೇಲ್ ಅವರ ಜನ್ಮದಿನದ 143ನೇ ವಾರ್ಷಿಕೋತ್ಸವದಂದು ಉದ್ಘಾಟಿಸಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.