ಬಳ್ಳಾರಿ ಲೋಕಸಭೆ ಕ್ಷೇತ್ರ: ಶೇ.69.592 ರಷ್ಟು ಮತದಾನ ಶಾಂತಿಯುತ ಮತದಾನ

ಬೆಳಗಾಯಿತು ವಾರ್ತೆ
ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಬುಧವಾರ ಮತದಾನ ಪ್ರಕ್ರಿಯೆ ನಡೆದಿದ್ದು, ಶೇ.69.592 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1925 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಕ್ಷೇತ್ರದ 1751297 ಮತದಾರರ ಪೈಕಿ 6,21,826 ಪುರುಷರು, 5,96924 ಮಹಿಳೆಯರು, 17 ಇತರೆ ಸೇರಿ ಒಟ್ಟು ಶೇ.69.592 (12,18,767) ಮತದಾರರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇ 73.37 ರಷ್ಟು ಮತದಾನವಾಗಿದ್ದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಅತಿಕಡಿಮೆ ಶೇ.63.05 ರಷ್ಟು ಮತದಾನವಾಗಿದೆ.
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 14,87,661 ಮತದಾರರ ಪೈಕಿ 10,34,452 ಮತದಾರರು ಹಕ್ಕು ಚಲಾಯಿಸಿದ್ದು, ಶೇ.69.53 ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಗಿಂತ ಶೇ.5 ರಷ್ಟು ಕಡಿಮೆ ಮತದಾನವಾಗಿದ್ದು, ಹೊಸದಾಗಿ ನೋಂದಣಿ ಮಾಡಿಕೊಂಡಿದ್ದ 1.84 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ಅವರು ವಿವರಿಸಿದರು.
ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಪ್ರಭಾರಿ ಐಎಎಸ್ ಅಧಿಕಾರಿ ನಂದಿನಿ ಇದ್ದರು.

ಅತಿ ಹೆಚ್ಚು ಮತದಾನದ ಮತಗಟ್ಟೆ:
ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 154ರಲ್ಲಿ ಕ್ಷೇತ್ರಕ್ಕೆ ಅತಿಹೆಚ್ಚು ಶೇ.90.23 ರಷ್ಟು ಮತದಾನವಾಗಿದ್ದು, ಅದೇ ಕ್ಷೇತ್ರದ ಮತಗಟ್ಟೆ ಸಂಖ್ಯೆ 9 ರಲ್ಲಿ ಅತಿಕಡಿಮೆ ಶೇ.0.56 ರಷ್ಟು ಮತದಾನವಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಮತಗಟ್ಟೆ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಮತದಾರರು ಹಕ್ಕು ಚಲಾಯಿಸಿಲ್ಲ. ಮತಗಟ್ಟೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿಗಳೇ ಹಕ್ಕು ಚಲಾಯಿಸಿದ್ದಾರೆ.

ವಿಶೇಷಚೇತನರಿಂದ ಮತದಾನ
ಅಲ್ಲದೇ ಕ್ಷೇತ್ರದಲ್ಲಿ ಒಟ್ಟು 20,351 ವಿಶೇಷಚೇತನ ಮತದಾರರಲ್ಲಿ 8254 ಪುರುಷರು, 5683 ಮಹಿಳೆಯರು ಸೇರಿ ಒಟ್ಟು ಶೇ.68.53 (13,947) ರಷ್ಟು ಮತದಾನವಾಗಿದೆ ಎಂದು ವಿವರಿಸಿದರು.

ಶೇ.15ಕ್ಕಿಂತ ಕಡಿಮೆ ಮತದಾನ
ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 34 ಮತಗಟ್ಟೆಗಳಲ್ಲಿ ಶೇ.15ಕ್ಕಿಂತ ಕಡಿಮೆ ಮತದಾನವಾಗಿದೆ.
ಹಡಗಲಿ 1,
ಹ.ಬೊ.ಹಳ್ಳಿ 1,
ವಿಜಯನಗರ 3,
ಕಂಪ್ಲಿ 13,
ಬಳ್ಳಾರಿ ಗ್ರಾಮೀಣ 1,
ಬಳ್ಳಾರಿ ನಗರ 1,
ಸಂಡೂರು 4,
ಕೂಡ್ಲಿಗಿ 10
ಒಟ್ಟು 34 ಮತಗಟ್ಟೆಗಳಲ್ಲಿ ಶೇ.15ಕ್ಕಿಂತ ಕಡಿಮೆ ಮತದಾನವಾಗಿದೆ.

ಇನ್ನು ಶೇ. 15ಕ್ಕಿಂತ ಹೆಚ್ಚು ಮತದಾನ
ಹಡಗಲಿ 2,
ಹ.ಬೊ.ಹಳ್ಳಿ 2,
ವಿಜಯನಗರ 5,
ಕಂಪ್ಲಿ 3,
ಬಳ್ಳಾರಿ ಗ್ರಾಮೀಣ 2,
ಬಳ್ಳಾರಿ ನಗರ 0,
ಸಂಡೂರು 4,
ಕೂಡ್ಲಿಗಿ 3
ಒಟ್ಟು 21 ಮತಗಟ್ಟೆಗಳಲ್ಲಿ ಶೇ.15ಕ್ಕಿಂತ ಹೆಚ್ಚು ಮತದಾನವಾಗಿದೆ

ಲೋಕಸಭೆ ಚುನಾವಣೆಯಲ್ಲಿ ಒಟ್ಟು 29,90,540 ರೂ.ಗಳನ್ನು ಸೀಜ್ ಮಾಡಲಾಗಿದೆ. ಅಬಕಾರಿ ಇಲಾಖೆಯು 1.96 ಕೋಟಿ ರೂ.ಗಳ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಒಟ್ಟು 991 ಪ್ರಕರಣ ದಾಖಲಾಗಿದೆ.

4 ಸಿಬ್ಬಂದಿ ಸಾವು: ಚುನಾವಣೆಗೆ ನಿಯೋಜಿಸಲಾಗಿದ್ದ ಒಬ್ಬ ಶಿಕ್ಷಕ ತಿಪ್ಪೇಸ್ವಾಮಿ, ಒಬ್ಬ ಪಿಡಿಯೊ ವೆಂಕಟಲಕ್ಷ್ಮೀ, ಒಬ್ಬ ಪೊಲೀಸ್ ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ

ಎಸ್‍ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಸೇರಿ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ 466 ಸೂಕ್ಷ್ಮ, 1688 ಸಾಧಾರಣ ಸೇರಿ ಒಟ್ಟು 2151 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಇದರಲ್ಲಿ 112 ಮತಗಟ್ಟೆಗಳಿಗೆ ವೆಬ್‍ಕ್ಯಾಸ್ಟಿಂಗ್ ಅಳವಡಿಸಲಾಗಿದ್ದು, 387 ಮೈಕ್ರೋ ಅಬ್ಜರ್ವರ್‍ಗಳನ್ನು ನಿಯೋಜಿಸಲಾಗಿತ್ತು. 175 ಭಯಗ್ರಸ್ಥ ಮತಗಟ್ಟೆಗಳಿಗೆ ಸಿಆರ್‍ಪಿಎಫ್, ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 1472 ಶ ಸ್ತ್ರಾಸ್ತ್ರಾಗಳಿಗೆ ಪರವಾನಿಗೆ ನೀಡಲಾಗಿದ್ದು, 1455 ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಠಾಣೆಗಳಲ್ಲಿ ಡೆಪಾಜಿಟ್ ಮಾಡಿಸಲಾಗಿದ್ದು, ಅನಧಿಕೃತವಾಗಿ ಕಂಟ್ರಿಮೇಡ್ ಶಸ್ತ್ರಾಸ್ತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಕಂಪ್ಲಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಚುನಾವಣೆಯಲ್ಲಿ ಪೊಲೀಸ್, ಸಿಆರ್‍ಪಿಎಫ್, ಸಿವಿಲ್, ಡಿಎಆರ್, ಕೆಎಸ್‍ಆರ್‍ಪಿ, ಗೃಹರಕ್ಷಕ ಸಿಬ್ಬಂದಿ ಸೇರಿ ಒಟ್ಟು 4200 ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ.

3 ಸುತ್ತಿನ ಭದ್ರತೆ
ಆರ್‍ವೈಎಂಇಸಿ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಟ್ಟು ಭದ್ರಪಡಿಸಲಾಗಿರುವ ಸ್ಟ್ರಾಂಗ್ ರೂಮ್‍ಗಳಿಗೆ ಮೂರು ಸುತ್ತಿನ ಭದ್ರತೆ ಒದಗಿಸಲಾಗಿದ್ದು, ಪ್ರತಿ ಪಾಳಿಯಲ್ಲಿ 100 ಜನ ಸಿಬ್ಬಂದಿಗಳು ಭದ್ರತೆ ಒದಗಿಸಲಿದ್ದಾರೆ ಎಂದು ಎಸ್ಪಿ ನಿಂಬರಗಿ ವಿವರಿಸಿದರು.

* ಹ.ಬೊ.ಹಳ್ಳಿ ಅತಿಹೆಚ್ಚು ಶೇ.73.37
* ಅತಿಕಡಿಮೆ ಬಳ್ಳಾರಿ ನಗರ ಶೇ.63.05
* ಚುನಾವಣೆಗೆ ನಿಯೋಜಿಸಿದ್ದ 4 ಸಿಬ್ಬಂದಿ ಮರಣ
* ಅಬಕಾರಿ ಇಲಾಖೆಯಿಂದ 1.96 ಕೋಟಿ ಮೌಲ್ಯದ ಮದ್ಯವಶ
* ಪೊಲೀಸ್ ಇಲಾಖೆಯಿಂದ 27.90 ಲಕ್ಷ ರೂ. ವಶಕ್ಕೆ

ಮತದಾನ ಪ್ರಕ್ರಿಯೆಯು ಕ್ಷೇತ್ರದಾದ್ಯಂತ ಶಾಂತಿಯುತ ಮತ್ತು ಸುಸೂತ್ರವಾಗಿ ನಡೆದಿದೆ. ಆದರೆ, ಕೆಲವೆಡೆ ಹೆಚ್ಚಿನ ಪ್ರಮಾಣದಲ್ಲಿ ವಿವಿ ಪ್ಯಾಟ್ ಸಮಸ್ಯೆ ಕಂಡುಬಂದಿದ್ದು, 247 ವಿವಿ ಪ್ಯಾಟ್‍ಗಳನ್ನು ಬದಲಾವಣೆ ಮಾಡಲಾಗಿದೆ. ಇದರೊಂದಿಗೆ 5 ಬ್ಯಾಲೆಟ್ ಯೂನಿಟ್, 5 ಕಂಟ್ರೋಲ್ ಯೂನಿಟ್‍ಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.
– ಡಿಸಿ ರಾಮಪ್ರಸಾತ್

ಮತದಾರರ ಶೇಕಡಾ ಮತದಾನ
88-ಹಡಗಲಿ 71.45
89-ಹಗರಿಬೊಮ್ಮನಹಳ್ಳಿ 73.37
90-ವಿಜಯನಗರ 68.59
91-ಕಂಪ್ಲಿ 70.72
93-ಬಳ್ಳಾರಿ ಗ್ರಾಮೀಣ 70.12
94-ಬಳ್ಳಾರಿ ನಗರ 63.05
95-ಸಂಡೂರು 71.16
96-ಕೂಡ್ಲಿಗಿ 69.22
ಒಟ್ಟು 69.592

Leave a Reply

Your email address will not be published. Required fields are marked *