ರೋಗದ ಬಗ್ಗೆ ಮುನ್ನೇಚ್ಚರಿಕೆ ವಹಿಸಬೇಕು

ರೋಗದ ಬಗ್ಗೆ ಮುನ್ನೇಚ್ಚರಿಕೆ ವಹಿಸಬೇಕು

ಬೆಳಗಾಯಿತು ವಾರ್ತೆ

ಸಿಂಧನೂರು : ಏಡ್ಸ್ ಎಂಬುದು ಮಾನವನ ಆರ್ಥಿಕ ಮತ್ತು ಸಾಮಾಜಿಕ ಜೀವನಕ್ಕೆ ಕುಂದು ತರುವ ರೋಗವಾಗಿದ್ದು ಇಂತಹ ರೋಗದ ಬಗ್ಗೆ ಪ್ರತಿಯೊಬ್ಬರು ಮುನ್ನೇಚ್ಚರಿಕೆಯನ್ನು ವಹಿಸಬೇಕೆಂದು ಉಪನ್ಯಾಸಕ ಸುರೇಶ ಮುಳ್ಳೂರು ಹೇಳಿದರು.

ಅವರು ನಗರದ ಕನಕದಾಸ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಏಡ್ಸ್ ರೋಗವು ನಾಲ್ಕು ಪ್ರಮುಖ ಕಾರಣಗಳಿಂದ ಅರಡುತ್ತದೆ. ಅಸುರಕ್ಷಿತ ಲೈಂಗಿಕತೆ, ಸಂಸ್ಕರಿಸಿದ ರಕ್ತ ಬಳಕೆ, ತಾಯಿಯಿಂದ ಮಗುವಿಗೆ ಸಂಸ್ಕರಿಸಿದ ಸಿರೀಂಜ್ ಬಳಕೆಯಿಂದ ಹರಡುತ್ತದೆ. ಈ ಅಂಶಗಳ ಬಗ್ಗೆ ಜನಜಾಗೃತಿ ಅಗತ್ಯವಾಗಿದೆ. ಆರೋಗ್ಯವಂತ ಪ್ರಜೆಗಳಾಗಿ ಬಾಳಲು ಮಾರಕ ರೋಗಗಳಿಂದ ಸದಾ ದೂರ ಉಳಿಯುವುದು ಒಳಿತು ಎಂದರು.

ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಡಿಸ್ವಾಮಿ ಗುಡದೂರು, ಉಪನ್ಯಾಸಕರಾದ ಶ್ರೀಶೈಲ್ ಎಚ್.ಎಂ, ಹಿರೇಲಿಂಗಪ್ಪ, ಬಸವರಾಜ ಕಡದೊಡ್ಡಿ, ಶಶಿಕಲಾ, ಕರೆಪ್ಪ ಬನ್ನದ್, ವೆಂಕೋಬ ಎನ್ ಸೇರಿದಂತೆ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಏಡ್ಸ್ ಎಂಬುದು ವ್ಯಕ್ತಿಯನ್ನು ಮುಟ್ಟುವುದರಿಂದ, ಅವನೊಡನೆ ಮಾತನಾಡವುದರಿಂದ ಬರುವುದಲ್ಲ. ಏಡ್ಸ್ ಸೋಂಕು ಹೊಂದಿದ ವ್ಯಕ್ತಿಗೆ ಸೀರಿಂಜ್‍ನ್ನು ಚುಚ್ಚುವುದರಿಂದ, ಹಾಗು ಅವನ ರಕ್ತದ ಕಣಗಳು ಇನ್ನೊಬ್ಬ ವ್ಯಕ್ತಿಗೆ ತಗಲುವುದರಿಂದ ಬರುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ರೋಗದ ಬಗ್ಗೆ ಜಾಗೃತಿ ವಹಿಸಿ, ರೋಗಗಳು ಬರದಂತೆ ಜನ ಜಾಗೃತಿ ಮೂಡಿಸಲು ಮುಂದಾಗಬೇಕು- ಮಂಜುನಾಥ, ಪ್ರಾಚಾರ್ಯ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.