5 ಸಾವಿರ ಮಾಸ್ಕ್ ತಯಾರಿಕೆಯಲ್ಲಿ ಕೈದಿಗಳು ಮಗ್ನ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಇಡೀ ಜಗತ್ತೆ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಸಮರ ಸಾರುತ್ತಿದೆ.

ಈಗಾಗಲೇ ಇಟಲಿ, ಚೀನಾ ದೇಶಗಳಲ್ಲಿ ಕೊರೊನಾ ವೈರಸ್ ಅತ್ಯಾಧಿಕ ಮರಣ ಮೃದಂಗ ಭಾರಿಸಿದೆ.
ಭಾರತದಲ್ಲಿಯೂ ಕಾಲಿಟ್ಟಿರುವ ಈ ಸೋಂಕನ್ನು ಹತ್ತಿಕ್ಕಲು ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್​ಗಳ ಮೊರೆ ಹೋಗುತ್ತಿದ್ದು, ರಾಜ್ಯದ ಕೈದಿಗಳು ಫೇಸ್ ಮಾಸ್ಕ್ ತಯಾರಿಸಲು ತಲ್ಲೀನರಾಗಿದ್ದಾರೆ.

ರಾಜ್ಯದ 8 ಕಾರಾಗೃಹಗಳಲ್ಲಿನ ಕೈದಿಗಳು ಫೇಸ್ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದು, ದಿನಂಪ್ರತಿ 5,000 ಮಾಸ್ಕ್ ಗಳನ್ನು ಉತ್ಪಾದಿಸಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು ಕೇಂದ್ರ ಕಾರಾಗೃಹ ಒಂದರಲ್ಲೇ 2,000 ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿರುವ ಪೋಲಿಸ್ ಆಯುಕ್ತರ ಕಚೇರಿ, ಪ್ರಧಾನ ಕಚೇರಿ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಹಲವು ಕಚೇರಿಗಳಿಗೆ ಸುಮಾರು 17 ಸಾವಿರ ಮಾಸ್ಕ್ ಗಳನ್ನು ರವಾನಿಸಲಾಗುತ್ತಿದ್ದು, ಉತ್ಪಾದನಾ ವೆಚ್ಚ 6 ರೂ ಆಗಿದೆ.

ಇನ್ನು, ಜೈಲಿನಲ್ಲಿ ಕೊರೊನಾ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಜೈಲಿಗೆ ಪ್ರವೇಶ ಪಡೆದ ಬಂಧಿಗಳನ್ನು ಮೊದಲು ಸಂಪೂರ್ಣ ಪರೀಕ್ಷೆ ಒಳಪಡಿಸಿ ಬಳಿಕ ಪ್ರತ್ಯೇಕ ಬ್ಯಾರಕ್​ಗೆ ರವಾನಿಸಲಾಗ್ತಿದೆ. ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೂ ತಾತ್ಕಾಲಿಕ ನಿರ್ಬಂಧಿಸಲಾಗಿದೆ.ಅಲ್ಲದೇ, ಸಂಬಂಧಿಕರೊಂದಿಗೆ ಮಾತನಾಡಲು ಫೋನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು, ಕೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter