ದೇಶದ  ರೈಲ್ವೆ  ಇತಿಹಾಸದಲ್ಲಿ   2019 ಪ್ರಯಾಣಿಕರ ಸಾವಿಲ್ಲದ ವರ್ಷ…!

ದೇಶದ ರೈಲ್ವೆ ಇತಿಹಾಸದಲ್ಲಿ 2019 ಪ್ರಯಾಣಿಕರ ಸಾವಿಲ್ಲದ ವರ್ಷ…!

ನವದೆಹಲಿ : ಭಾರತೀಯ ರೈಲ್ವೆ ಇತಿಹಾಸದಲ್ಲಿ ೨೦೧೯ ನೇ ಇಸವಿ ಸದಾ ಸ್ಮರಣೀಯವಾಗಿ ನಿಲ್ಲಲಿದೆ. ಕಾರಣದ ಈ ವರ್ಷದಲ್ಲಿ ನಡೆದ ರೈಲು ಅಪಘಾತಗಳಲ್ಲಿ ಒಬ್ಬನೇ ಒಬ್ಬ ಪ್ರಯಾಣಿಕನ ಸಾವು ಸಂಭವಿಸಿಲ್ಲ. “ವಂದೇ ಮಾತರಂ” ಹೆಸರಿನಲ್ಲಿ ವಿಶ್ವದರ್ಜೆ ಸೇವೆಯ ಅತ್ಯಂತ ಅಗ್ಗದ ಸೆಮಿ ಹೈಸ್ಪೀಡ್ ರೈಲುಗಳಿಗೆ ಚಾಲನೆ ನೀಡಿದೆ ಹಾಗೂ ೧೧೪ ವರ್ಷದ ರೈಲ್ವೆ ಮಂಡಳಿಯನ್ನು ಪುನರ್ರಚಿಸಲಾಗಿದೆ.


ಭಾರತೀಯ ರೈಲ್ವೆ ೨೦೧೯ರಲ್ಲಿ ನಡೆದ ರೈಲು ಅಪಘಾತಗಳಲ್ಲಿ ಸಾವುಗಳ ಸಂಖ್ಯೆಯನ್ನು ದಾಖಲೆಯ ಶೂನ್ಯ ಮಟ್ಟಕ್ಕೆ ಇಳಿಸಿದೆ. ರೈಲ್ವೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದಾರೆ ಆದರೆ, ಕಳೆದ ೧೨ ತಿಂಗಳುಗಳಲ್ಲಿ ಯಾವುದೇ ಪ್ರಮಾಣಿಕರು ಮೃತಪಟ್ಟಿಲ್ಲ

ಈ ಮೂಲಕ ೨೦೧೯, ರೈಲ್ವೆ ಇತಿಹಾಸದಲ್ಲಿ ಅತ್ಯಂತ ಸುರಕ್ಷಿತ ವರ್ಷ ಎನಿಸಿಕೊಂಡಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.
ರೈಲ್ವೆ ನಿರ್ವಹಣೆಯ ವಿಧಾನಗಳಲ್ಲಿನ ಬದಲಾವಣೆಗಳು, ವಿಶೇಷವಾಗಿ ರೈಲು ಹಳಿಗಳ ನವೀಕರಣ ಮತ್ತು ನಿರ್ವಹಣೆ ೨೦೧೯ ಅನ್ನು ಪ್ರಯಾಣಿಕರ ಸಾವು ರಹಿತ ವರ್ಷವನ್ನಾಗಿಸಿದೆ. ರೈಲ್ವೆ’ ಶೂನ್ಯ ಅಪಘಾತ ’ಗುರಿಯನ್ನು ಸಾಧಿಸುವ ದಿನಗಳು ದೂರವಿರಲಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈಲ್ವೆ ನಿರ್ವಹಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ರೈಲ್ವೆ ಬ್ಲಾಕ್ ಗಳನ್ನು ಯಾಂತ್ರಿಕವಾಗಿ ಮತ್ತು ವ್ಯವಸ್ಥಿತವಾಗಿ ಬದಲಾಯಿಸಿ ರೈಲು ನವೀಕರಣಗೊಳಿಸಲಾಗಿದೆ. ರೈಲು ನಿರ್ವಹಣೆಗಾಗಿ ಯಂತ್ರಗಳ ಬಳಕೆಯನ್ನು ಪ್ರಾರಂಭಿಸಲಾಗಿದೆ ಇದರ ಪರಿಣಾಮವ ಈ ವರ್ಷ ರೈಲು ಹಳಿ ತಪ್ಪಿದ್ದರಿಂದ ಯಾವುದೇ ಅಪಘಾತ ಸಂಭವಿಸಿಲ್ಲ.
ಈ ವರ್ಷದ ಇತರ ಪ್ರಮುಖ ಸಾಧನೆಗಳಲ್ಲಿ, ರೈಲ್ವೆಯ ಯಾಂತ್ರಿಕ ವ್ಯವಸ್ಥೆ ಆಧುನೀಕರಣಗೊಳಿಸುವಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗಿದೆ
೩,೫೦೦ ಕಿಲೋಮೀಟರ್‌ಗಿಂತ ಹೆಚ್ಚು ಉದ್ದದ ರೈಲು ಹಳಿಗಳನ್ನು ನವೀಕರಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡಾ ೨೭ ರಷ್ಟು ಹೆಚ್ಚಿನದಾಗಿದೆ.
ಈ ವರ್ಷದ ಏಪ್ರಿಲ್ ಮತ್ತು ನವೆಂಬರ್ ನಡುವೆ, ೪೯೫ ವಿದ್ಯುತ್ ಲೋಕೋಮೋಟಿವ್‌ಗಳನ್ನು ನಿರ್ಮಿಸಲಾಗಿದೆ – ಹಿಂದಿನ ವರ್ಷಕ್ಕಿಂತ ಶೇಕಡಾ ೬೦ ರಷ್ಟು ಹೆಚ್ಚಳವಾಗಿದೆ.

ಎಲ್‌ಎಚ್‌ಬಿ ಬೋಗಿಗಳ ಉತ್ಪಾದನೆಯ ವಿಷಯದಲ್ಲಿ ಶೇ ೪೦ ರಷ್ಟು ಹೆಚ್ಚಳವಾಗಿದೆ.
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ಹಂಚಿಕೆಯನ್ನು ಹಿಂದಿನ ವರ್ಷಕ್ಕಿಂತ ೧,೬೦,೧೭೬ ಕೋಟಿ ರೂ.ಗೆ ಹೆಚ್ಚಿಸಿದ್ದು, ನವೆಂಬರ್ ವೇಳೆಗೆ ಶೇಕಡಾ ೬೪ ರಷ್ಟು ಬಳಕೆಯಾಗಿದೆ ಎಂದು ಅವರು ಹೇಳಿದರು. ವಿದ್ಯುದ್ದೀಕರಣದಲ್ಲಿ ಶೇಕಡಾ ೪೨ ರಷ್ಟು ಕಾಲ್ಸೇತುವೆಗಳ ನಿರ್ಮಾಣದಲ್ಲಿ ಶೇ. ೪೪ ರಷ್ಟು ಹೆಚ್ಚಳವಾಗಿದೆ. ವರ್ಷಾಂತ್ಯದಲ್ಲಿ ಹೊಸ ಮಾರ್ಗಗಳನ್ನು ಮುಕ್ತಗೊಳಿಸಲಾಗಿದೆ. ರೈಲ್ವೆ ಹಳಿಗಳ ಡಬ್ಬಲಿಂಗ್, ಬ್ರಾಡ್ ಗೇಜ್ ಗೆ ಬದಲಾಯಿಸುವುದು. ಪೂರ್ವ ಹಾಗೂ ಪಶ್ಚಿಮ ಸರಕು ಕಾರಿಡಾರ್‌ಗಳಲ್ಲಿ ೫೦೦ ಕಿ.ಮೀ.ಗಿಂತ ಹೆಚ್ಚಿನ ಮಾರ್ಗಗಳನ್ನು ಸಂಚಾರಕ್ಕಾಗಿ ತೆರೆಯಲಾಗಿದೆ ಎಂದು ಅಂಕ ಅಂಶ ನೀಡಿದ್ದಾರೆ.

ದೆಹಲಿಯಿಂದ ಮುಂಬೈ ಮತ್ತು ಕೋಲ್ಕತ್ತಾ ಟ್ರಂಕ್ ಮಾರ್ಗಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಆಧುನೀಕರಣ ಸೇರಿದಂತೆ ರೈಲುಗಳ ವೇಗ ಹೆಚ್ಚಿಸುವ ೧೩,೦೦೦ ಕೋಟಿ ರೂ.ಯೋಜನೆ ಆರಂಭಗೊಂಡಿದ್ದು, ಯೋಜನೆ ೨೦೨೧ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು

ದೆಹಲಿಯಿಂದ ಮುಂಬೈ ಮತ್ತು ಕೋಲ್ಕತಾ ಮಾರ್ಗಗಳಿಗೆ ರೈಲುಗಳನ್ನು ಬೇಡಿಕೆಯ ಮೇರೆಗೆ ಓಡಿಸಲು ಸಾಧ್ಯವಾಗುತ್ತದೆ ಇದರಿಂದ ಈ ಎರಡೂ ಮಾರ್ಗಗಳಲ್ಲಿ ಟಿಕೆಟ್‌ಗಳ ನಿರೀಕ್ಷಣಾ ವ್ಯವಸ್ಥೆಯನ್ನು ರದ್ದುಪಡಿಸಲಾಗುತ್ತದೆ ಎಂದು ಯಾದವ್ ಹೇಳಿದರು. ರೈಲ್ವೆಯ ಕಾರ್ಯಾಚರಣೆಯ ಅನುಪಾತ ನಿರಂತರ ಒತ್ತಡದಲ್ಲಿದೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ರೈಲ್ವೆಯ ಮುಂದೆ ಆರ್ಥಿಕ ಸವಾಲುಗಳಿವೆ ಎಂದು ಉತ್ತರಿಸಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.