ಭಾರತ ಪ್ರವಾಸಕ್ಕೆ ತಂಡ ಪ್ರಕಟಿಸಿದ ಬಾಂಗ್ಲಾ

ಭಾರತ ಪ್ರವಾಸಕ್ಕೆ ತಂಡ ಪ್ರಕಟಿಸಿದ ಬಾಂಗ್ಲಾ

ಢಾಕಾ: ಭಾರತ ಪ್ರವಾಸ ಬೆಳೆಸಲಿರುವ ಬಾಂಗ್ಲಾದೇಶ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು ಟೆಸ್ಟ್ ತಂಡವನ್ನು ಮೊಮಿನುಲ್ ಹಕ್ ಮುನ್ನಡೆಸಲಿದ್ದು, ಮಹಮುದುಲ್ಲ ಟಿ-20 ಪಂದ್ಯಗಳಲ್ಲಿ ನಾಯಕರಾಗಿ ಕಣಕ್ಕೆ ಇಳಿಯಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ ನಿಷೇಧಕ್ಕೆ ಒಳಗಾಗಿರುವ ಶಕೀಬ್ ಅಲ್ ಹಸನ್ ಅವರ ಬದಲಿಗೆ ಅಬು ಹೈದರ್ ರೋನಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮೊಹಮ್ಮದ್ ಸೈಫುದ್ದಿನ್ ಬದಲಿಗೆ ಮೊಹಮ್ಮದ್ ಮಿಥುನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ-20 ಪಂದ್ಯಗಳಿಗೆ ಶಕೀಬ್ ಅವರ ಸ್ಥಾನದಲ್ಲಿ ತೈಜುಲ್ ಇಸ್ಲಾಮ್ ತಂಡ ಸೇರಿದ್ದಾರೆ. ನವಂಬರ್ ಮೂರರಿಂದ ರಾಜಕೋಟ್, ನ.7 ನಾಗ್ಪುರ್, ನ.10 ರಂದು ಚುಟುಕು ಪಂದ್ಯಗಳು ನಡೆಯಲಿವೆ.

ಟೆಸ್ಟ್ ತಂಡ: ಶದ್ಮನ್ ಇಸ್ಲಾಮ್, ಇಮ್ರುಲ್ ಕೀಸ್, ಸೈಫ್ ಹಸನ್, ಮೊಮಿನುಲ್ ಹಕ್ (ನಾಯಕ), ಮುಷ್ಫೀಕರ್ ರಹೀಮ್, ಮೊಹಮುದುಲ್ಲ, ಮೊಹಮ್ಮದ್ ಮಿಥುನ್, ಮೊಸದಿಕ್ ಹುಸೇನ್, ಮೆಹದಿ ಹಸನ್, ತೈಜು ಇಸ್ಲಾಮ್, ಮುಷ್ತಾಫಿಜುರ್ ರಹಮಾನ್, ಅಲ್ ಅಮಿನ್ ಹುಸೇನ್, ಎಬ್ದೊತ್ ಹುಸೇನ್.

ಟಿ-20 ತಂಡ: ಸೌಮ್ಯ ಸರ್ಕಾರ್, ಮೊಹಮ್ಮದ್ ನಯೀಮ್, ಮೊಹಮುದುಲ್ಲ (ನಾಯಕ), ಆಫಿಫ್ ಹುಸೇನ್, ಮೊಸದಿಕ್ ಹುಸೇನ್, ಅನಿಮುಲ್ ಇಸ್ಲಾಮ್, ಲಿಟನ್ ದಾಸ್, ಮುಷ್ಫೀಕರ್ ರಹೀಮ್, ಅರ್ತಾಫ್ ಸನಿ, ಅಲ್ ಅಮಿನ್ ಹುಸೇನ್, ಮುಷ್ತಾಫಿಜುರ್ ರಹಮಾನ್, ಶೈಫುಲ್ಲಾ ಇಸ್ಲಾಮ್, ಮೊಹಮ್ಮದ್ ಮಿಥುನ್, ತೈಜು ಇಸ್ಲಾಮ್, ಅಬು ಹೈದರ್ ರೋನಿ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.