ಆಸೀಸ್ ನಲ್ಲಿ ಬೌಲಿಂಗ್ ಮಾಡುವುದು ದೊಡ್ಡ ಸವಾಲು: ಮಿಸ್ಬಾ

ಆಸೀಸ್ ನಲ್ಲಿ ಬೌಲಿಂಗ್ ಮಾಡುವುದು ದೊಡ್ಡ ಸವಾಲು: ಮಿಸ್ಬಾ

ಸಿಡ್ನಿ: ವಾತಾವರಣಕ್ಕೆ ಹೊಂದಿಕೊಂಡು ಉತ್ತಮವಾಗಿ ಆಡುವ ಅನಿವಾರ್ಯತೆ ಇದೆ ಎಂದು ಪಾಕಿಸ್ತಾನ ತಂಡದ ಕೋಚ್ ಮಿಸ್ಬಾ ಉಲ್ ಹಕ್ ತಿಳಿಸಿದ್ದಾರೆ.
ಪಾಕ್, ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದು, ಟಿ-20 ಸರಣಿಯನ್ನು ಆಡಲಿದೆ. ಪಾಕ್, ಆಸೀಸ್ ನೆಲದಲ್ಲಿ 1995ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಗೆದ್ದು ಬೀಗಿತ್ತು. ಉಳಿದಂತೆ ನಾಲ್ಕು ಬಾರಿ ಕಾಂಗರೂ ನಾಡಿನ ಪ್ರವಾಸ ಮಾಡಿರುವ ಪಾಕಿಸ್ತಾನ ವೈಟ್ ವಾಷ್ ಸೋಲು ಕಂಡಿದೆ. ಮಿಸ್ಬಾ ಅವರು 2016-17 ರಲ್ಲಿ ಪಾಕ್ ತಂಡದ ನಾಯಕರಾಗಿದ್ದರು.

“ನಾವು ಆಡುವಾಗ ಹಾಗೂ ಈಗ ಆಡಲು ಪರಿಸ್ಥಿತಿ ಹಾಗೂ ವಾತಾವರಣ ಎರಡೂ ಬೇರೆಯಾಗಿವೆ. ತಂಡ ವೇಗ ಹಾಗೂ ಬೌನ್ಸ್ ಗೆ ಹೊಂದಿಕೊಂಡು ಆಡಬೇಕಿದೆ. ಏಷ್ಯಾ ಖಂಡದ ರಾಷ್ಟ್ರಗಳ ಬಲ ಎಂದರೆ ಸ್ಪಿನ್ ಬೌಲರ್ ಗಳು” ಎಂದು ಮಿಸ್ಬಾ ತಿಳಿಸಿದ್ದಾರೆ.
“ಈ ವಾತಾವರಣದಲ್ಲಿ ಬೌಲಿಂಗ್ ಶೈಲಿ ಕೊಂಚ ಭಿನ್ನವಾಗಬೇಕು, ಅಲ್ಲದೆ ಲೈನ್ ಮತ್ತು ಲೆಂಥ್ ಸಹ ಬೇರೆಯದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಮೆಟ್ಟಿ ನಿಲ್ಲುವ ಅವಶ್ಯಕತೆ ಇದೆ ಎಂದಿದ್ದಾರೆ.

ತವರಿನಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಸೋಲಿನ ಬೆನ್ನಲ್ಲೆ ಸರ್ಫರಾಜ್ ಅವರ ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಯುವ ಆಟಗಾರರಿಗೆ ಮಣೆ ಹಾಕಿದೆ. ಅಜರ್ ಅಲಿ ಅವರಿಗೆ ಟೆಸ್ಟ್ ಹಾಗೂ ಟಿ-20 ಪಂದ್ಯಗಳನ್ನು ಬಾಬರ್ ಅಜಮ್ ತಂಡವನ್ನು ಮುನ್ನಡೆಸಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.