ಭಾನುವಾರ ಕರ್ಫ್ಯೂ ಅಂತ್ಯ: ಮೃಗಾಲಯ ವೀಕ್ಷಣೆ ಪ್ರಾರಂಭ

Share on facebook
Share on twitter
Share on linkedin
Share on whatsapp
Share on email


ಬಳ್ಳಾರಿ/ಹೊಸಪೇಟೆ: ಕಮಲಾಪುರ ಬಳಿಯಿರುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್  ಪಾರ್ಕ್ ಆಗಸ್ಟ್ 2ರ ನಂತರದ ಭಾನುವಾರದಂದು ಸಹ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     ಕೋವಿಡ್19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಾರಿಗೊಳಿಸಿದ್ದ ಭಾನುವಾರದ ಕರ್ಫ್ಯೂ ಜು.31ರಿಂದ ಮುಕ್ತಾಯವಾದ ಕಾರಣ ಇನ್ಮುಂದೆ ಆಗಸ್ಟ್ ತಿಂಗಳಿಂದ ಪ್ರತಿ ವಾರದ ಮಂಗಳವಾರದ ರಜಾದಿನದಂದು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಪ್ರವಾಸಿಗರ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *