ಬಂಡಿಪುರದಲ್ಲಿ ಎರಡು ಹುಲಿ ಹೆಚ್ಚು ಇದ್ದಿದ್ದರೆ ಮೊದಲ ಸ್ಥಾನ ದೊರೆಯುತ್ತಿತ್ತು

Share on facebook
Share on twitter
Share on linkedin
Share on whatsapp
Share on email

ಚಾಮರಾನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ ರಾಜ್ಯದಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದೇಶದ ಹುಲಿ ಸಂತತಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಬಂಡಿಪುರದಲ್ಲಿ ಎರಡು ಹುಲಿಗಳು ಹೆಚ್ಚಿಗೆ ಇದ್ದಿದ್ದರೆ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು.

ಇದೀಗ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿ ಪ್ರದೇಶವನ್ನು ಸಹ ಹಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಚಾಮರಾಜನಗರ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಿಶ್ವ ಹುಲಿ ದಿನದ ಸಮಯದಲ್ಲಿ ಬಿಡುಗಡೆಯಾದ ಹುಲಿ ಸಮೀಕ್ಷಾ ವರದಿಯಯಲ್ಲಿ ಬಂಡೀಪುರಕ್ಕೆ ಮತ್ತೊಮ್ಮೆ ಅತಿ ಹೆಚ್ಚು ಹುಲಿಗಳಿರುವ ಆವಾಸ ಸ್ಥಾನ ಎಂಬುದನ್ನು ದೃಢಪಡಿಸಿದೆ. ಇಲ್ಲಿ ಹುಲಿಗಳ ವಾಸಸ್ಥಾನಕ್ಕೆ ಬೇಕಾದ ಪೂರಕ ಹವಾಗುಣ, ಪರಿಸರ, ಆಹಾರ ಲಭ್ಯವಿದೆ.


ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯ ಕಾರ್ಯ ನಡೆಸುತ್ತದೆ. ಕರ್ನಾಟಕದ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ, ನವದೆಹಲಿಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ಸಹಯೋಗದಲ್ಲಿ ೨೦೧೪ರಲ್ಲಿ ಹುಲಿ ಗಣತಿ ನಡೆದಾಗ ದೇಶದಲ್ಲಿದ್ದ ಒಟ್ಟು ೫೦ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು ೨೨೨೬ ಹುಲಿಗಳು ಕಂಡು ಬಂದಿದ್ದವು. ಆಗ ಕರ್ನಾಟಕ ರಾಜ್ಯದಲ್ಲಿರುವ ೫ ಹುಲಿ ಸಂರಕ್ಷಿತ ಪ್ರದೇಶಗಳಾದ, ಭದ್ರ, ಕಾಳಿ (ದಾಂಡೇಲಿ), ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟಾರೆ ೪೦೬ಕ್ಕೂ ಹೆಚ್ಚು ಹುಲಿಗಳು ಪತ್ತೆಯಾಗಿದ್ದವು.

ಇದರಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿಸಂರಕ್ಷಿತ ಪ್ರದೇಶವೊಂದೇ ೧೩೯ಕ್ಕೂ ಹೆಚ್ಚು ಹುಲಿಗಳನ್ನು ಹೊಂದಿದ್ದು, ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಅಂದು ಕಾಯ್ದಿರಿಸಿಕೊಂಡಿತ್ತು.

ಆದರೆ ಅದೃಷ್ಟವಶಾತ್ ಮತ್ತೊಮ್ಮೆ ೨೦೧೮ರಲ್ಲಿ ಎನ್‌ಟಿಸಿಎ ನಿರ್ದೇಶನದ ಮೇರೆಗೆ ಹುಲಿಗಣತಿಯು ದೇಶಾದ್ಯಂತ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಏಕಕಾಲದಲ್ಲಿ ನಡೆದಾಗ, ಆ ಸಾಲಿನ ಪಟ್ಟಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನಮಂತ್ರಿ ನರೇಂದ್ರ ಮೋದಿರವರು ೨೦೧೯ರಲ್ಲಿ ಬಿಡುಗಡೆ ಮಾಡಿದಾಗ ಮದ್ಯಪ್ರದೇಶವು ಒಟ್ಟಾರೆ ೪೨೮ ಹುಲಿಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡರೆ, ರಾಜ್ಯವು ಒಟ್ಟಾರೆ ೪೨೬ ಹುಲಿಗಳೊಂದಿಗೆ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter