ಕೊರೋನಾ ಸೊಂಕಿತ ಮೃತ

Share on facebook
Share on twitter
Share on linkedin
Share on whatsapp
Share on email

ಮರಿಯಮ್ಮನಹಳ್ಳಿ:ಪಟ್ಟಣದ 7ನೇ ವಾರ್ಡಿನ ಒಂದೇ ಕುಟುಂಬದ ಆರು ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟವರಲ್ಲಿ 45 ವರ್ಷದ ಪುರುಷ ಗುರುವಾರ ಬಳ್ಳಾರಿಯ ಕೋವಿಡ್-19 ಆಸ್ಪತ್ರೆಯಲ್ಲಿ ನಿಧನರಾದರು.

ಉಸಿರಾಟದ ತೊಂದರೆಯಿಂದ ಇವರು ಮೃತರಾದರು. ಕಳೆದ(ಜು.26) ಭಾನುವಾರದಂದು ಇವರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಯಿತು.ಸೊಂಕು ದೃಢಪಟ್ಟಿದ್ದರಿಂದ ಹೊಸಪೇಟೆಯಿಂದ ಬಳ್ಳಾರಿಯ ಕೋವಿಡ್ ಆಸ್ಪತ್ರೆಗೆ ಇವರನ್ನು ಚಿಕಿತ್ಸೆಗೆ ಸಾಗಿಸಲಾಗಿತ್ತು.     

  ನಿರ್ಲಕ್ಷ್ಯ: ಶೀತಹಾಗುಕೆಮ್ಮು ಪೀಡಿತರಿಗೆ ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸುತ್ತಾರೆ.ಸರ್ಕಾರಿ ಆಸ್ಪತ್ರೆಗೆ ತೆರಳಿದವರಿಗೆ ಕಡ್ಡಾಯವಾಗಿ ಗಂಟಲುದ್ರವ ಪರೀಕ್ಷೆಗೆ ಸೂಚಿಸಿ,ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಗಂಟಲುದ್ರವ ಪರೀಕ್ಷೆಗೆ ಒಳಪಟ್ಟಿರುವವರು ಪರೀಕ್ಷೆಯ ವರದಿ ಬರುವವರಗೂ ಹೋಂ ಕ್ವಾರೆಂಟನ್ ಸೂಚಿಸುವ, ಆರೋಗ್ಯ ಇಲಾಖೆಯವರು ವರದಿಯು ವಿಳಂಬವಾಗಿ ಬರುವುದರಿಂದ ಪರೀಕ್ಷೆಗೆ ಒಳಪಟ್ಟವರು ವರದಿಗಾಗಿ ಕಾಯಬೇಕಿದೆ.ಪಾಸಿಟಿವ್ ಬಂದನಂತರ ಸೊಂಕಿತರನ್ನು ಚಿಕಿತ್ಸೆಗೆ ಕರೆದೊಯ್ಯವಲ್ಲಿ ವಿಳಂಬ ಮಾಡುತ್ತಾರೆ.ಇತ್ತೀಚೆಗೆ ಸೊಂಕಿತರಿಗೆ ಚಿಕಿತ್ಸೆಗೆ ಕರೆದೊಯ್ಯುವ ಕುರಿತು ತಿಳಿಸಿದ ನಂತರ 2-3 ದಿನಗಳ ನಂತರ ಕರೆದೊಯ್ಯುತ್ತಿದ್ದಾರೆಂಂದು ಸೊಂಕಿತರ ಕುಟುಂಬದವರು ದೂರುತ್ತಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter