ಹೊಸಪೇಟೆಯಲ್ಲಿ 12.5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ/ಹೊಸಪೇಟೆ: ಹುಡಾ ಅಧ್ಯಕ್ಷ ಹುದ್ದೆಯು ಸವಾಲಿನದ್ದಾಗಿದ್ದು, ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಬುದ್ಧಿವಂತಿಕೆ ಹಾಗೂ ಸರ್ಕಾರದ ಕಾನೂನು ಯೋಜನೆಗಳನ್ನು ಅರ್ಥೈಸಿಕೊಂಡು ಸಾರ್ವಜನಿಕರಿಗೆ ಅದರ ಮಾಹಿತಿ ನೀಡಿ ಅಭಿವೃದ್ಧಿ ಕಾರ್ಯನಿರ್ವಹಿಸಬೇಕು ಎಂದು ಅರಣ್ಯ ಸಚಿವರು ಆಗಿರುವ‌ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಹೊಸಪೇಟೆ ನಗರದ ಹುಡಾ ಕಚೇರಿ ಸಭಾಂಗಣದಲ್ಲಿ ಭಾನುವಾರ ನೂತನವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಶೋಕ್ ಜೀರೆ ಅವರ ಪದಗ್ರಹಣ ಸಮಾಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ನಗರಾಭಿವೃದ್ಧಿ ಪ್ರಾಧಿಕಾರವು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ನಿಯಮಾವಳಿಗಳ ನಡುವೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಗಮನ ಹಾಗೂ ಸಹಕಾರ ಅಧ್ಯಕ್ಷರ ಮೇಲಿರುತ್ತದೆ. ಆದ್ದರಿಂದ ನಗರದ ಏಳಿಗೆಗೆ ಶ್ರಮವಹಿಸಿ ಅಭಿವೃದ್ಧಿಯತ್ತ ಕೊಂಡ್ಯೊಯ್ಯಬೇಕು. ಹೊಸಪೇಟೆ ನಗರದ ನಕ್ಷೆಯನ್ನೇ ಬದಲಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದರು.
ನಗರದ ಮುಖ್ಯಭಾಗದಲ್ಲಿ 12.5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ ನಿರ್ಮಿಸಲು ಇಚ್ಛಿಸಿರುವುದಾಗಿ ಸಚಿವರು ತಿಳಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter