ಸಾರ್ವಜನಿಕರ ಗಮನಕ್ಕೆ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಲ್ಲಿ ಸೋಮವಾರದಂದು 3 ಪಾಸಿಟಿವ್ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಈ ಸೊಂಕಿತರ ಪ್ರಯಾಣದ ವಿವರಗಳನ್ನು ಪರಿಶೀಲಿಸಿದಾಗ ಮಾ.16 ರಂದು ಶತಾಬ್ದಿ ಎಕ್ಸ್‍ಪ್ರೆಸ್‍ನ ಕೋಚ್ ಸಂಖ್ಯೆ 1 ರಲ್ಲಿ 39 ಮತ್ತು 40 ರ ಆಸನದಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದು ಹಾಗೂ ಮಾ. 18 ರಂದು ಹಿಂದಿರುಗು ಪ್ರಯಾಣದಲ್ಲಿ ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್‍ನಿಂದ ಹೊಸಪೇಟೆಗೆ ಎಸ್ 1 ಕೋಚ್‍ನ 70 ಮತ್ತು 72 ರ ಸೀಟ್‍ನಲ್ಲಿ ಪ್ರಯಾಣಿಸಿರುತ್ತಾರೆ.

ಯಾರಾದರೂ ಸಹ ಪ್ರಯಾಣಿಕರು ಇವರೊಡನೆ ಪ್ರಯಾಣ ಬೆಳಸಿದ್ದಲ್ಲಿ ಆರೋಗ್ಯ ಇಲಾಖೆಯ ಸಹಾಯವಾಣಿ 104 ಇಲ್ಲವೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಬಳ್ಳಾರಿಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯವರು ಯಾರಾದರೂ ಪ್ರಯಾಣಿಸಿದ್ದಲ್ಲಿ ಜಿಲ್ಲಾ ಸಹಾಯವಾಣಿ 08392-277100 ಗೆ ಸಂಪರ್ಕಿಸಬಹುದಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter