ಬಳ್ಳಾರಿಯಲ್ಲಿ ರಾಜ್ಯ ಮಟ್ಟದ 30ನೇ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನ

ಬಳ್ಳಾರಿಯಲ್ಲಿ ರಾಜ್ಯ ಮಟ್ಟದ 30ನೇ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನ


ಬೆಳಗಾಯಿತು ವಾರ್ತೆ
ಬಳ್ಳಾರಿ : ಹೆರಿಗೆ ಸಮಯದಲ್ಲಿ ತಾಯಿಯಂದಿರ ಮರಣದ ಸಂಖ್ಯೆ ಹೆಚ್ಚುತ್ತಿದ್ದು ಇದು ವೈದ್ಯ ಲೋಕಕ್ಕೆ ಸವಾಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಾಯಿ ಮರಣದ ಸಂಖ್ಯೆ ಕಡಿಮೆ ಮಾಡುವುದು ಹೇಗೆ ಎನ್ನುವುದರ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಸಂಘದ ಮುಖ್ಯಸ್ಥರಾದ ಡಾ. ಸುಮನ್ ಗಡ್ಡಿಯವರು ತಿಳಿಸಿದರು.

ನಗರದಲ್ಲಿನ ವಿಮ್ಸ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30ನೇ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.

ವಿಮ್ಸ್‍ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಆಯೋಜಕ ಕಾರ್ಯದರ್ಶಿಯಾದ ಡಾ. ವಿಜಯೆಂದ್ರ ಮಾತನಾಡಿ, ನಗರದಲ್ಲಿ ಪ್ರಥಮ ಬಾರಿಗೆ 30ನೇ ರಾಜ್ಯ ಮಟ್ಟದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನವನ್ನು ದಿನಾಂಕ ಸೆಪ್ಟೆಂಬರ್ 13, 14 ಮತ್ತು 15 ರಂದು ಆಯೋಜಿಸಲಾಗಿದೆ.

ಗೌರವಾನ್ವಿತರಾಗಿ ಗುರುರಾಜ್ ಕರಜಿಗಿ ಮತ್ತು ಅಂತರಾಷ್ರ್ಟೀಯದಿಂದ ಖ್ಯಾತ ವೈದ್ಯರು ಆಗಮಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಸುಮಾರು 1000 – 1200 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಾ. ಸುಮನ್ ಗಡ್ಡಿ, ಡಾ. ಚಂದ್ರಶೇಖರ್, ಡಾ. ವಿಜಯೇಂದ್ರ, ಡಾ. ರಾಮರಾಜ್ ಮತ್ತಿತ್ತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.