ರಾಜೀವ ರಿಲೀಸ್‍ಗೆ ಮುಹೂರ್ತ ಫಿಕ್ಸ್

ರಾಜೀವ ರಿಲೀಸ್‍ಗೆ ಮುಹೂರ್ತ ಫಿಕ್ಸ್

ಗ್ಯಾಪ್ ನಂತರ ಬಣ್ಣ ಹಚ್ಚಿರುವ ಮಯೂರ್ ಪಟೇಲ್ ನಾಯಕರಾಗಿ ನಟಿಸಿರುವ ‘ರಾಜೀವ’ ಸಿನಿಮಾ ರಿಲೀಸ್‍ಗೆ ಮುಹೂರ್ತ ಕೂಡಿ ಬಂದಿದೆ. ಹೌದು ರಾಜೀವ ಐಎಎಸ್ ಯುವ ರೈತ ಚಿತ್ರ ಹೊಸ ವರ್ಷದ ಮೊದಲ ವಾರ (ಜ.3 ರಂದು) ಬಿಡುಗಡೆಯಾಗುತ್ತಿದೆ. ಈಗಾಗಲೇ ತನ್ನ ಸುಂದರವಾದ ಹಾಡುಗಳಿಂದ ಗಮನ ಸೇಳೆದಿರುವ ಈ ಚಿತ್ರದಲ್ಲಿ ರೈತರ ಕಷ್ಟವನ್ನು ಹೇಳಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಆಳವಡಿಸಿಕೊಂಡು ರೈತರು ಹೇಗೆ ಮೇಲೆ ಬರಬೇಕು ಎಂಬ ಅಂಶಗಳ ಬಗ್ಗೆಯೋ ಚರ್ಚೆ ಮಾಡಲಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿರುವುದು ಈ ಚಿತ್ರದ ವಿಶೇಷ.

ಕಥನಾಯಕ ಐಎಎಸ್ ಮಾಡಿ ಪಟ್ಟಣದಿಂದ ಹಳ್ಳಿಗೆ ಬರುತ್ತಾನೆ. ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಕಂಡು ಖೇದಗೊಳ್ಳುತ್ತಾನೆ. ನಂತರ ಹಳ್ಳಿಗಳನ್ನು ತೊರೆದು ಸಿಟಿಗೆ ಬರುತ್ತಿರುವ ಯುವಕರ ಮನಸ್ಸನ್ನು ಬದಲಿಸಿ ಇಲ್ಲಿಯೇ ಇದ್ದು ಕೃಷಿಯಲ್ಲಿ ತೊಡಗಿಕೊಳ್ಳಲು ಯಾವ ರೀತಿ ಹೋರಾಡುತ್ತಾನೆ ಎನ್ನುವುದು ಕಥೆಯ ತಿರುಳಾಗಿದೆ. ಮಂಡ್ಯಾ, ಬೆಂಗಳೂರು ಸುತ್ತಮಯತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರಕ್ಕೆ ಪ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೂದಲ ಸಿನಿಮಾ. ಯುವ ರೈತರ ಕಥೆಯನ್ನು ಒಳಗೊಂಡ ಈ ಚಿತ್ರದ ರೈತ ಹಾಡೊಂದು ಹಿಟ್ ಲಿಸ್ಟ್ ಸೇರಿದೆ ಇದನ್ನು ನಟ ವಶಿಷ್ಠ ಸಿಂಹ ಹಾಡಿದ್ದಾರೆ. ಮಯೂರ್ ಪಟೇಲ್ ನಾಯಕರಾಗಿದ್ದು, ಇದು ಅವರ ರಿಲಾಂಚ್ ಸಿನಿಮಾ ಎನ್ನಬಹುದು. ಅವರಿಲ್ಲಿ 25, 40 ಮತ್ತು 60 ವರ್ಷದವರಾಗಿ ಮೂರು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಯೂರ್ ಪಟೇಲ್‍ಗೆ ನಾಯಕಿಯಾಗಿ ನಟಿಸಿರುವ ಅಕ್ಷತಾ ಶಾಸ್ತ್ರೀಗೆ ಇದು ಹತ್ತನೆ ಸಿನಿಮಾ.

ಶೇಖರ್ ಸೋವರ್ ಸಾಹಿತ್ಯದ ಆರು ಹಾಡುಗಳಿಗೆ ರೋಹಿತ್ ಸೋವರ್ ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ಒಂದು ಗೀತೆಗೆ ಮಯೂರ್ ಪಟೇಲ್ ಧ್ವನಿಯಾಗಿದ್ದಾರೆ. ಇನ್ನೊಂದು ಗೀತೆಗೆ ನಟ ವಸಿಷ್ಠ ಎನ್ ಸಿಂಹ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ವಿಜಯ್ ಸೋವರ್ ಸಂಕಲನ, ವರ್ಧನ್ ನೃತ್ಯ, ಕಾಕೋಳು ರಾಮಯ್ಯ ಸಂಭಾಷಣೆ, ಆನಂದ್ ಇಳಯರಾಜ ಛಾಯಾಗ್ರಹಣವಿದೆ. ಇನ್ನು ಜಿ.ಎಂ.ರಮೇಶ್ ಹಾಗೂ ಕಿರಣ್.ಕೆ ಅವರುಗಳು ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಹರಿ ವೇಲು ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ತಿತರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.