ಹಿರಿಯ ಮನಸ್ಸುಗಳ ಅಮೃತವಾಹಿನಿ

Share on facebook
Share on twitter
Share on linkedin
Share on whatsapp
Share on email

ಹಿರಿಯ ಸಾಹಿತಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಮೊದಲಬಾರಿ ನಟಿಸಿರುವ ‘ಅಮೃತವಾಹಿನಿ’ ಚಿತ್ರದ ಆಡಿಯೋ ಸಿಡಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತು ಶುರು ಮಾಡಿದ ಕವಿಗಳು ‘ಬರೆಯುವುದು ಸುಲಭ. ಅಭಿನಯಿಸುವುದು ಕಷ್ಟ. ನನ್ನನ್ನು ನಾನು ಮರೆತು ಇನ್ನೊಬ್ಬರಾಗಿ ಪರಕಾಯ ಪ್ರವೇಶ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಬೇಬಿ ಋತ್ವಿ ಮುಗ್ದಳಾಗಿ ಕಂಡರೂ, ಅವಳಲ್ಲಿ ಕಲಾ ಸರಸ್ವತಿ ಸುಪ್ತವಾಗಿ ಸೇರಿಕೊಂಡಿದೆ. ಸಂಗೀತ ನಿರ್ದೇಶಕರು ನಿಸಾರ್ ಅಹಮದ್ ಹೇಳಿರುವಂತೆ ಏಕ ಪತ್ನಿ ವ್ರತಸ್ಥ, ಒಂದೇ ಕೆರೆ ಬೆಸ್ತ, ಸಿನಿಮಾಕ್ಕೆ ನಿಜವಾದ ಕವಿತೆ ಬರೆಯಲಾಗಿದೆ. ಹಾಡುಗಳು ಹಳೇ ಕಾಲದ ಚಿತ್ರಗಳನ್ನು ನೆನಪಿಸುತ್ತವೆ. ನಿರ್ದೇಶಕರು ಬೆಳಗಿನ ಜಾವ ನಾಲ್ಕು ಘಂಟೆ ತನಕ ಕೆಲಸ ಮಾಡಿಸಿದ್ದಾರೆ. ವೃದ್ದರೆಲ್ಲಾ ಅನುಭವಿಸುತ್ತಿರುವ ಸ್ಥಿತಿಯನ್ನು ಕಥೆಯಲ್ಲಿ ಹೇಳಲಾಗಿದೆ. ಭಾರತ ದೇಶ ವೃದ್ದರಿಗೆ ಯೋಗ್ಯವಲ್ಲ. 5-6 ವೃದ್ದರಲ್ಲಿ ನಾನು ಪ್ರಥಮ ವೃದ್ದನಾಗಿದ್ದೇನೆ. ಎಲ್ಲಾ ಮನೆಯಲ್ಲಿ ಬಿಕ್ಕಟ್ಟು ಇರುವಂತೆ ಇದರಲ್ಲೂ ಇರುವ ಸನ್ನಿವೇಶಗಳು ಬರುತ್ತವೆ. ತಂದೆಗೆ ಹೇಳದೆ ಪ್ರೀತಿಸಿದವಳನ್ನು ಮನೆಗೆ ಕರೆದುಕೊಂಡು ಬಂದಾಗ ಅಂದಿನಿಂದ ಮಗ-ಸೊಸೆಯೊಂದಿಗೆ ಸಂಘರ್ಷ ಶುರುವಾಗುತ್ತದೆ. ಕೊನೆಗೆ ಆಶಾಕಿರಣದಂತೆ ಮೊಮ್ಮಗಳ ಪ್ರವೇಶದೊಂದಿಗೆ ತಿರುವು ಪಡೆದುಕೊಂಡು ಮಾನವೀಯ ಸ್ಪರ್ಶದೊಂದಿಗೆ ಕೊನೆಗೊಳ್ಳುತ್ತದೆ. ಅಂತರಂಗದಲ್ಲಿ ಅಂದುಕೊಂಡಿದ್ದನ್ನು ಬಹಿರಂಗವಾಗಿ ಮಾಡಿದ್ದೇನೆಂದು’ ಹೇಳಿದರು.

ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರಿಗೆ ನಿರ್ದೇಶನ ಮಾಡುವ ಆಸೆ ಕೊನೆಗೂ ಈಡೇರಲಿಲ್ಲ. ಅದರ ದುಖಃ ಈಗಲೂ ಕಾಡುತ್ತಿದೆ. ಅದನ್ನು ನೆರವೇರಿಸಿದವರು ಕವಿಗಳು. ಮೂರ್ತಿ ಸರ್ ಹನ್ನೋಂದು ದಿನ ಹಗಲು ರಾತ್ರಿ ಎನ್ನದೆ ನಟಿಸಿದ್ದರಿಂದ, ಅಂದುಕೊಂಡಿದ್ದಕ್ಕಿಂತ ಎರಡು ದಿನಗಳ ಮುಂಚಿತವಾಗಿ ಶೂಟಿಂಗ್ ಮುಗಿದಿದೆ. ಅವರಿಗೆ ಕಥೆ ಹೇಳಿದಾಗ ಮೊದಲು ಒಪ್ಪಲಿಲ್ಲ. ವಯಸ್ಸಾದ ಪಾತ್ರವಾಗಿದ್ದರಿಂದ ಖಾಯಿಲೆ ಇದ್ದು, ಕೆಮ್ಮ ಬೇಕಾಗಿತ್ತು. ಸೆಟ್‍ನಲ್ಲಿ ಅದನ್ನು ಮರೆತು ಹೋಗಿದ್ದಾಗ ನೆನಪಿಸುತ್ತಿದ್ದೆ. ವಯಸ್ಸಿನಲ್ಲಿ 76 ಇರಬಹುದು. ಆದರೆ ಅವರು ಹದಿನಾರರಂತೆ ಕಾಣುತ್ತಾರೆ. ಮುಂದಿನ ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡುತ್ತೆನೆಂದು’ ನಿರ್ದೇಶಕ ಕೆ.ನರೇಂದ್ರ ಬಾಬು ಅನುಭವಗಳನ್ನು ಹಂಚಿಕೊಂಡರು. ಕವಿಗಳನ್ನು ಕ್ಯಾಮಾರ ಮುಂದೆ ನಿಲ್ಲಿಸಲು ಒಪ್ಪಿಸಿದ್ದನ್ನು ನೆನಪು ಮಾಡಿಕೊಂಡ ನಿರ್ಮಾಪಕ ಕೆ.ಸಂಪತ್ ಕುಮಾರ್ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.

80ರ ದಶಕದಲ್ಲಿ ವೆಂಕಟೇಶ್‍ಮೂರ್ತಿ ಸಾಹಿತ್ಯದ ಸಾಕಷ್ಟು ಭಾವಗೀತೆಗಳನ್ನು ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿತ್ತು. ಇಂದು ಅದಕ್ಕೆ ಬರ ಬಂದಿದೆ ಅಂತಾರೆ ಲಹರಿ ವೇಲು, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಇಂದು ಸೇನೆಯ ರಾಜ್ಯಾಧ್ಯಕ್ಷ ವಿನಯ್ ಗೌಡ, ಛಾಯಾಗ್ರಾಹಕ ಗಿರಿಧರ್ ದಿವಾನ್, ನಿರ್ಮಾಪಕ ಅನಂತ ಪದ್ಮನಾಭ್, ಸುಪ್ರಿಯಾ, ಶಿವಮೊಗ್ಗ ಮೂಲದ ಹಿರಿಯ ಛಾಯಾಗ್ರಾಹಕ ವೈದ್ಯ ಉಪಸ್ತಿತರಿದ್ದು, ತಮ್ಮ ಅನುಭವ ಹಂಚಿಕೊಂಡರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter