ಬಳ್ಳಾರಿ: ವಿಜಯನಗರ ಜಿಲ್ಲೆಯಿಂದ ಕಂಪ್ಲಿ ತಾಲೂಕು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಇಂದು ತಾಲೂಕು ಹೋರಾಟ ಸಮಿತಿಯಿಂದ ಕಂಪ್ಲಿ ಬಂದ್ ಗೆ ಕರೆನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕಂಪ್ಲಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣ ವಾಗಿ ಬಂದ್ ಮಾಡಲಾಗಿದೆ. ಬಿಜೆಪಿ ಸರ್ಕಾರ ಹಿಟ್ಲರ್ ಆಡಳಿತ ಅನುಸರಿಸುತ್ತಿದೆ ಎಂದು ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಆರೋಪಿಸಿದ್ದಾರೆ.
ವಿಜಯ ನಗರ ನೂತನ ಜಿಲ್ಲೆಗೆ ಮೊದಲು ಬೆಂಬಲು ಸೂಚಿಸಿದ್ದೆ ನಾನು. ಆದರೆ, ರಾಜಕೀಯ ಪಿತೂರಿಯಿಂದ ಕಂಪ್ಲಿ ತಾಲೂಕನ್ನು ಕೈಬಿಡಲಾಗಿದ್ದು, ಈ ಭಾಗದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಂಪ್ಲಿ ಜನರಿಗಾಗಿ ಯಾವುದೇ ತ್ಯಾಗಕ್ಕೂ ನಾನು ಸಿದ್ಧ. ಕಂಪ್ಲಿ ಪಟ್ಟಣ ಸ್ವತಃ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಹುಟ್ಟುರಾಗಿದ್ದು, ವಿಜಯ ನಗರ ಜಿಲ್ಲೆಯಿಂದ ಏಕೆ ಕೈ ಬಿಟ್ಟಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಂದ್ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಕ್ಸಮರ ನಡೆದಿದ್ದು, ಶಾಸಕ ಗಣೇಶ್ ಅವರ ವಿರುದ್ಧ ಘೋಷಣೆ ಕೂಗಲಾಯಿತು.