ಪವಮಾನ ಹೋಮ, ಹನುಮ ಮಾಲಾಧಾರಣೆ

ಪವಮಾನ ಹೋಮ, ಹನುಮ ಮಾಲಾಧಾರಣೆ


ಬೆಳಗಾಯಿತು ವಾರ್ತೆ

ಮರಿಯಮ್ಮನಹಳ್ಳಿ : ಪಟ್ಟಣದ ನಾಣಿಕೆರೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಪವಮಾನಹೋಮ ಹಾಗೂ ಹನುಮ ಮಾಲಾ ಧಾರಣೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಪುರೋಹಿತರಾದ ಕೃಷ್ಣ ಆಚಾರ್ಯರು ಮತ್ತು ತಂಡದಿಂದ ಪವಮಾನಹೋಮ , ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ನೆರವೇರಿದವು .

ನಂತರ ಮರಿಯಮ್ಮನಹಳ್ಳಿ, ಅಯ್ಯನಹಳ್ಳಿ, ಡಣಾಪುರ, ಯಶವಂತನಗರ, ವೆಂಕಟಾಪುರ, ವ್ಯಾಸನಕೆರೆ, ಹನುಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 120 ಕ್ಕೂ ಅಧಿಕ ಹನುಮ ಭಕ್ತರು ಹನುಮ ಮಾಲಾಧಾರಣೆ ಮಾಡಿದರು .ನಾಣಿಕೆರೆ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕರಾದ ಭೀಮಪ್ಪ ಪೂಜಾರ ಕೂಡ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.