ಅ.31ರಂದು ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆಗೆ ಮೋದಿ ಗೌರವ

ಅ.31ರಂದು ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆಗೆ ಮೋದಿ ಗೌರವ

ನವದೆಹಲಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅ.31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ನಲ್ಲಿರುವ ಏಕತೆಯ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ.

ಅಂದು ಪ್ರಧಾನಿ ಏಕತಾ ದಿವಸದ ಪೆರೇಡ್ ನಲ್ಲಿ ಪಾಲ್ಗೊಂಡು, ತಂತ್ರಜ್ಞಾನ ಪ್ರದರ್ಶನ ಪ್ರದೇಶಕ್ಕೆ ಭೇಟಿ ನೀಡಿ ನಂತರ ಕೇವಾಡಿಯದಲ್ಲಿನ ನಾಗರಿಕ ಸೇವೆಯ ತರಬೇತಿ ಅವಧಿಯಲ್ಲಿರುವವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬುಧವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

2014ರಿಂದ ಅ.31ರಂದು ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸಲಾಗುತ್ತಿದ್ದು, ವಿವಿಧ ವಲಯದ ಜನರು ಅಂದು ‘ಏಕತೆಗಾಗಿ ಓಟ’ ಹಮ್ಮಿಕೊಳ್ಳುತ್ತಾರೆ. ಕಳೆದ ಅ.27ರಂದು ನಡೆದ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ‘ಒಂದು ಭಾರತ, ಶ್ರೇಷ್ಠ ಭಾರತ’ ಗುರಿಯನ್ನು ಸಾಧಿಸಲು ಹೆಚ್ಚಿನ ಜನರು ‘ಏಕತೆಯ ಓಟ’ದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದರು.

ಈ ವರ್ಷ ಕೂಡ ಹಿಂದಿನ ವರ್ಷಗಳಂತೆ ಅ.31ರಂದು ಏಕತೆಯ ಓಟ ಹಮ್ಮಿಕೊಳ್ಳಲಾಗಿದೆ. ಇದು ದೇಶದ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ. ನಮ್ಮ ದೇಶ ಒಗ್ಗಟ್ಟಾಗಿದ್ದು, ಒಂದೇ ದಿಕ್ಕಿನಲ್ಲಿ ಸಾಗುತ್ತಾ, ಒಂದೇ ಗುರಿಯನ್ನು ಹೊಂದಿದೆ. ಅದೆಂದರೆ-ಒಂದು ಭಾರತ, ಶ್ರೇಷ್ಠ ಭಾರತ ಎಂಬುದನ್ನು ಸೂಚಿಸುತ್ತದ್ದೆ ಎಂದು ಮೋದಿ ಹೇಳಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.