ದೇವದಾಸಿ ಮಹಿಳೆಯರಿಂದ ಅರ್ಜಿ ಅಹ್ವಾನ

Share on facebook
Share on twitter
Share on linkedin
Share on whatsapp
Share on email


ಬಳ್ಳಾರಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆಯಲ್ಲಿ 2020-21ನೇ ಸಾಲಿನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನವನ್ನು ನೀಡಲಾಗುತ್ತಿದ್ದು, ಅರ್ಹ ದೇವದಾಸಿ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ   ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


      ಫಲಾನುಭವಿಗಳಿಗೆ ಘಟಕದ ವೆಚ್ಚದಡಿಯಲ್ಲಿ 50 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಇದರಲ್ಲಿ ಸಹಾಯಧನಕ್ಕೆ ಸಾಲ 25 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಅರ್ಹರು ಸರ್ಕಾರದ ಯಾವುದೇ ಯೋಜನೆಯಡಿ ಸಹಾಯಧನ ಪಡೆಯದೇ ಇರುವ ಮಾಜಿ ದೇವದಾಸಿ ಮಹಿಳೆಯರಿಗೆ ಪ್ರತಿ ಫಲಾನುಭವಿಗಳಿಗೆ 50 ಸಾವಿರ ರೂ.ಗಳಂತೆ ಸಹಾಯಧನ ನೀಡಲಾಗುತ್ತದೆ.


      ಆಸಕ್ತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, 4 ಭಾವಚಿತ್ರ, ವಯಸ್ಸಿನ ದೃಡಿಕರಣ ಪತ್ರ, ಆಧಾರ್ ಕಾರ್ಡ್, ಬೇಬಾಕಿ ಪ್ರಮಾಣ ಪತ್ರಗಳ ದಾಖಲೆಯೊಂದಿಗೆ ದೇವದಾಸಿ ಪುನರ್ವಸತಿ ಯೋಜನೆಯ ಆಯಾ ತಾಲೂಕಿನ ಯೋಜನಾ ಅನುಷ್ಠಾನ ಅಧಿಕಾರಿಗಳಿಂದ ಅರ್ಜಿಯನ್ನು ಪಡೆದು ಅ.15 ರೊಳಗೆ ದ್ವಿಪ್ರತಿಯಲ್ಲಿ ಇದೇ ಕಚೇರಿಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಮತ್ತು ಮದ್ಯವರ್ತಿಗಳಿಂದ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣ ಮಾಹಿತಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


    ಹೆಚ್ಚಿನ ಮಾಹಿತಿಗೆ ದೇವದಾಸಿ ಪುನರ್ವಸತಿ ಯೋಜನಾ ಜಿಲ್ಲಾ ಕಚೇರಿ ಹಾಗೂ ಹೊಸಪೇಟೆ ತಾಲೂಕಿನ ವಿಶ್ವನಾಥ್.ಹೆಚ್ ಮೊ.ಸಂ.9916154395, ಬಳ್ಳಾರಿ ತಾಲೂಕಿನ ಮುಕ್ಕಣ್ಣ ಮೊ.ಸಂ.9945833846, ಹಡಗಲಿಯ ಎ.ಜಿ.ಹಾಲನಗೌಡ ಮೊ.ಸಂ.8660110549, ಸಿರುಗುಪ್ಪದ ನಾಗರಾಜ ಮೊ.ಸಂ.9901963731, ಕೂಡ್ಲಿಗಿಯ ವಿಶ್ವನಾಥ್ ಹೆಚ್. ಮೊ.ಸಂ. 9916154395, ಹೆಚ್.ಬಿ.ಹಳ್ಳಿಯ ಹನುಂತಪ್ಪ ಮೊ.ಸಂ.9591916670, ಸಂಡೂರಿನ ನಾಗರಾಜ್ ಮೊ.ಸಂ.9901963731 ಹಾಗೂ ಹರಪನಹಳ್ಳಿ ತಾಲೂಕಿನ ಪ್ರಜ್ಞಾ ಮೊ.ಸಂ.99455270364ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter