ಡಿಎಂಎಫ್ ಸಭೆ* ಶಾಸಕರು ಒತ್ತಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಅಸ್ತು ಖನಿಜನಿಧಿ ಅಡಿ ಆರೋಗ್ಯಕ್ಕೆ ಆದ್ಯತೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: “ಜಿಲ್ಲಾ ಖನಿಜ ನಿಧಿ(ಡಿಎಂಎಫ್)ಯಲ್ಲಿನ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿನ ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಆದ್ಯತೆ ನೀಡಬೇಕು ಮತ್ತು ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಂತರ ಉಳಿದ ಅನುದಾನದಲ್ಲಿ ಶಿಕ್ಷಣ ಸೇರಿದಂತೆ ಉಳಿದ ಕ್ಷೇತ್ರಗಳತ್ತ ಗಮನಹರಿಸುವುದು ಸೂಕ್ತ”.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಎಂಎಫ್ ಸಭೆಯಲ್ಲಿ ಶಾಸಕರೆಲ್ಲರೂ ಒಕ್ಕರೊಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರೆಲ್ಲರ ಒಕ್ಕರೋಲಿನ ಒತ್ತಾಯಕ್ಕೆ ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ಅವರು ಸಹಮತ ವ್ಯಕ್ತಪಡಿಸಿ ಕೂಡಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆ ಹಾಗೂ ಬಲವರ್ಧನೆ, ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್ ಆಂಬ್ಯುಲೆನ್ಸ್,ವೆಂಟಿಲೇಟರ್ ಸೌಲಭ್ಯ ಹಾಗೂ ಇನ್ನೀತರ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಾರದೊಳಗೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಸೂಚಿಸಿದರು.

ಈ ಕ್ರಿಯಾಯೋಜನೆಗೆ ಆಗುವ ವೆಚ್ಚ ಹೊರತುಪಡಿಸಿ ಉಳಿದ ಅನುದಾನವನ್ನು ಶಿಕ್ಷಣ, ರಸ್ತೆ ನಿರ್ಮಾಣ,ಕುಡಿಯುವ ನೀರು ಹಾಗೂ ಇನ್ನೀತರ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ಅವರು ತಿಳಿಸಿದರು.ಜಿಲ್ಲೆಯ ಅಭಿವೃದ್ಧಿ,ಕೋವಿಡ್ ನಿಯಂತ್ರಿಸುವ ಹಾಗೂ ಇನ್ನೀತರ ವಿಷಯಗಳಲ್ಲಿ ಶಾಸಕರು ಯಾವ ರೀತಿಯ ಸಲಹೆಗಳನ್ನು ನೀಡುತ್ತಾರೋ ಅವುಗಳನ್ನು ಪರಿಗಣಿಸಿ; ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಹಾಯಕತೆ ತೋರಬೇಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಖಡಕ್ ಸೂಚನೆ ನೀಡಿದರು.

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಕುರಿತು ಅμÉ್ಟೂಂದು ಜಾಗೃತಿ ಇಲ್ಲ;ಹೀಗಾಗಿಯೇ ಜನರು ಬಹುತೇಕ ಮಾಸ್ಕ್ ಧರಿಸುತ್ತಿಲ್ಲ ಮತ್ತು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಮತ್ತು ಜಾಗೃತಿಯ ಅವಶ್ಯಕತೆ ಇದ್ದು,ಅರಿವು ಮೂಡಿಸಿ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ನಾಗೇಂದ್ರ ಅವರ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ರಿಮೋಟ್ ಏರಿಯಾಗಳಲ್ಲಿ ಕೋವಿಡ್ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.

ರಾಜ್ಯಕ್ಕೆ ಬೇಕಾಗುವ ಶೇ.80ರಷ್ಟು ಆಕ್ಸಿಜನ್ ಬಳ್ಳಾರಿಯಲ್ಲಿ ಉತ್ಪಾದನೆ
ಬಳ್ಳಾರಿಯಲ್ಲಿ ಇಡೀ ರಾಜ್ಯಕ್ಕೆ ಬೇಕಾಗುವ ಶೇ.80ರಷ್ಟು ಆಕ್ಸಿಜನ್ ಇಲ್ಲಿಂದಲೇ ಸರಬರಾಜಾಗುತ್ತಿದೆ;ಯಾವುದೇ ರೀತಿಯ ಕೊರತೆ ನಮ್ಮಲ್ಲಿಲ್ಲ. ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯನ್ನು ನಾನ್ ಕೋವಿಡ್ ಆಸ್ಪತ್ರೆಯನ್ನಾಗಿ ಇನ್ಮುಂದೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಭೆಗೆ ತಿಳಿಸಿದರು.ಜಿಲ್ಲೆಯಲ್ಲಿ ಇದುವರೆಗೆ 31107ಪ್ರಕರಣಗಳು ದೃಢಪಟ್ಟಿದ್ದು,ಸದ್ಯ 2559 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಕಳೆದ ಎರಡು ತಿಂಗಳ ಕೋವಿಡ್ ಪ್ರಮಾಣಕ್ಕೆ ಹೊಲಿಕೆ ಮಾಡಿ ನೋಡಿದರೇ ಈ ತಿಂಗಳ ಸೊಂಕಿತರ ಸಂಖ್ಯೆಯ ಪ್ರಮಾಣ ಇಳಿಕೆಯಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter