9 ಜನರಿಗೆ ಹೊಸದಾಗಿ ಕೋವಿಡ್‌ ಸೊಂಕು

Share on facebook
Share on twitter
Share on linkedin
Share on whatsapp
Share on email


ಳ್ಳಾರಿ,: ಕೋವಿಡ್ ಜಿಲ್ಲಾಸ್ಪತ್ರೆಯಿಂದ ಗುಣಮುಖರಾದ ಹಿನ್ನೆಲೆಯಲ್ಲಿ 11 ಜನರನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಇಂದು ಹೊಸದಾಗಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವುದು ಸೇರಿದಂತೆ ಒಟ್ಟು 19 ಸಕ್ರಿಯ ಪ್ರಕರಣಗಳ ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ದೃಢಪಟ್ಟ 47 ಪ್ರಕರಣಗಳಲ್ಲಿ ಇದುವರೆಗೆ 27 ಜನರು ಗುಣಮುಖರಾಗಿದ್ದು,ಓರ್ವ ಸಾವನ್ನಪ್ಪಿದ್ದಾರೆ.


ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ವಿವರ:  
18ವರ್ಷದ ಪಿ-930 ಯುವತಿ ಮೂಲತಃ ಸಿರಗುಪ್ಪ ತಾಲೂಕಿನ ಗೋಸ್‌ಬಾಳು ಗ್ರಾಮದವರಾಗಿದ್ದು,ಆಂಧ್ರದ ಗೂಳ್ಯಂ ದಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. ಪಿ-1062 46 ವರ್ಷದ ಪುರುಷ ಇವರು ಹರಪನಳ್ಳಿಯವರಾಗಿದ್ದಾರೆ. ಅಹಮದಾಬಾದ್‌ನಿಂದ ಬಂದ ಟ್ರಾವೆಲ್ ಹಿಸ್ಟರಿ ಇದೆ. ಪಿ-1947 11ವರ್ಷದ ಬಾಲಕ ಇವರು ಮೂಲತಃ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯವರಾಗಿದ್ದು  ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ. ಪಿ-1543 19ವರ್ಷದ ಯುವಕ ಬಳ್ಳಾರಿಯ ಇಂದಿರಾ ನಗರದವರಾಗಿದ್ದು ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ. ಪಿ-1545 29 ವರ್ಷದ ಪುರುಷ ಬಳ್ಳಾರಿ ತಾಲ್ಲೂಕಿನ ನಾಗೆನಹಳ್ಳಿಯವರು ಇವರು ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ.

ಪಿ-1546 26ವರ್ಷದ ಯುವತಿ ರೂಪನಗುಡಿಯವರಾಗಿದ್ದು ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ. ಪಿ-1948 31ವರ್ಷದ ಮಹಿಳೆ ಬಳ್ಳಾರಿ ತಾಲೂಕಿನ ಚಾಗನೂರಿನವರು ಮಹಾರಾಷ್ಟçದಿಂದ ವಲಸೆ. ಪಿ-1949 23ವರ್ಷದ ಯುವಕ ಹೊಸಪೇಟೆ ತಾಲ್ಲೂಕಿನ ಸುಗ್ಗೆನಹಳ್ಳಿಯವರು;ಮಹಾರಾಷ್ಟçದಿಂದ ವಲಸೆ. ಪಿ-1963 45 ವರ್ಷದ ಮಹಿಳೆಯು ಬಳ್ಳಾರಿಯ ಸುಲೇಮಾನ್ ಬೀದಿ. ಪಿ-1964 29 ವರ್ಷದ ಹೆಣ್ಣು ರೂಪನಗುಡಿಯವರಾಗಿದ್ದು ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ. ಪಿ-1965 35ವರ್ಷದ ಹೆಣ್ಣು ರೂಪನಗುಡಿಯವರಾಗಿದ್ದು ಮಹಾರಾಷ್ಟçದಿಂದ ವಲಸೆ ಬಂದಿರುತ್ತಾರೆ.


ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ದರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು, ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮ ಸ್ಥೆöÊರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು; ಇಷ್ಟು ಜನರು ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter