ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ 45,ಸಾವಿರ ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ತವರಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಜೂನ್.13ರವರೆಗೆ ಒಂದು ಲಕ್ಷ ಜನರನ್ನು ಭಾರತಕ್ಕೆ ಕರೆ ತರಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಕೊರೋನಾ ಸೋಂಕು ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಲಾಕ್ ಡೌನ್ ವಿಧಿಸಲಾಗಿತ್ತು, ಹಿನ್ನೆಲೆಯಲ್ಲಿ ಸಾವಿರಾರು ಭಾರತೀಯರು ವಿದೇಶದಲ್ಲಿ ಬಂಧಿಯಾಗಿದ್ದರು ಈವರೆಗೆ 45,216 ಮಂದಿ ಭಾರತೀಯರನ್ನು ಮರಳಿ ಕರೆತರಲಾಗಿದೆ.ಅವರಲ್ಲಿ 8,069 ವಲಸೆ ಕಾರ್ಮಿಕರು, 7,656 ವಿದ್ಯಾರ್ಥಿಗಳು ಮತ್ತು 5,107 ವೃತ್ತಿಪರರು ಸೇರಿದ್ದಾರೆ..

ಲ್ಯಾಟಿನ್ ಅಮೆರಿಕಾ, ಕೆರಿಬಿಯನ್, ಆಫ್ರಿಕಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter