ನ್ಯೂಜೆರ್ಸಿ, ನ್ಯೂಯಾರ್ಕ್ ರಾಜ್ಯಗಳಲ್ಲಿ ಪೂರ್ಣ ಕ್ವಾರಂಟೇನ್ ಇಲ್ಲ

Share on facebook
Share on twitter
Share on linkedin
Share on whatsapp
Share on email
ವಾಷಿಂಗ್ಟನ್: ಕರೋನ ತಡೆಗೆ ನ್ಯೂಯಾರ್ಕ್, ನ್ಯೂಜೆರ್ಸಿ ಇತರೆ ರಾಜ್ಯಗಳಲ್ಲಿ ಸದ್ಯಕ್ಕೆ ಸಂಪೂರ್ಣ ಸಂಪರ್ಕ ತಡೆ ( ಕ್ವಾರಂಟೆನ್ ) ವಿಧಿಸಲಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ .

ಬದಲಿಗೆ ಈ ರಾಜ್ಯಗಳಲ್ಲಿ ಜನರಿಗೆ ಪ್ರಯಾಣ ಸಲಹೆ ಪಾಲಿಸಲು ನಿಯಮ ಮಾಡಲಾಗಿದೆ ಎಂದು ಟ್ರಂಪ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ “ಹಾಟ್ ಸ್ಪಾಟ್” ಗಳಾಗಿರುವ ರಾಜ್ಯಗಳಾದ – ನ್ಯೂಯಾರ್ಕ್, ನ್ಯೂಜೆರ್ಸಿ ರಾಜ್ಯಗಳಲ್ಲಿ ಅಲ್ಪಾವಧಿಯ ಸಂಪರ್ಕತಡೆಯನ್ನು ಹೇರಲಾಗುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಶ್ವೇತಭವನದ ಕರೋನಾವೈರಸ್ ಟಾಸ್ಕ್ ಫೋರ್ಸ್ನ ಶಿಫಾರಸ್ಸಿನ ಮೇರೆಗೆ ಮತ್ತು ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ನ ಗವರ್ನರ್ ಅವರೊಂದಿಗೆ ಸಮಾಲೋಚಿಸಿದ ನಂತರ, ಪ್ರಯಾಣ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ ಫೆಡರಲ್ ಸರ್ಕಾರ. ಸದ್ಯಕ್ಕೆ ಸಂಪರ್ಕತಡೆ ಅಗತ್ಯವಿಲ್ಲ. ಇತರೆ ಅನೇಕ ನಿರ್ಬಂಧವನ್ನು “ಕಟ್ಟಿನಿಟ್ಟಾಗಿ ಜಾರಿಗೊಳಿಸಬೇಕು ಎಂದರು.

ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಪ್ರಕಾರ, ಅಮೆರಿಕದಲ್ಲಿ 122,000 ಕ್ಕೂ ಹೆಚ್ಚು ಕರೋನ ಪ್ರಕರಣಗಳು ವರದಿಯಾಗಿದ್ದು ಈವರೆಗೆ 2,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು ಈ ಪೈಕಿ ನ್ಯೂಯಾರ್ಕ್ ನಗರವೊಂದರಲ್ಲೆ 500 ಕ್ಕೂ ಹೆಚ್ಚು ಕರೋನವೈರಸ್ ಸಾವುಗಳು ದೃಡಪಟ್ಟಿವೆ .

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter