ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, :ನಿರ್ಭಯ ಪ್ರಕರಣದ ತಪ್ಪಿತಸ್ಥ ಮುಖೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

ತನ್ನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಖೇಶ್ ಪರವಾಗಿ ವಕೀಲರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾನುಮತಿ ನೇತೃತ್ವದ ನ್ಯಾಯಪೀಠ ಆರ್ಜಿಯನ್ನು ವಜಾಗೊಳಿಸಿರುವುದಾಗಿ ತೀರ್ಪು ನೀಡಿದೆ. ಜೈಲಿನಲ್ಲಿ ಖೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣದಿಂದ ರಾಷ್ಟ್ರಪತಿ ಆದೇಶವನ್ನು ಪರಿಶೀಲಿಸಲುಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಫೆಬ್ರವರಿ ೧ ರಂದು ಬೆಳಿಗ್ಗೆ ೬ ಗಂಟೆಗೆ ನಿರ್ಭಯಾ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ತಿಹಾರ್ ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಏತನ್ಮಧ್ಯೆ, ಮರಣದಂಡನೆಗೊಳಗಾದ ನಾಲ್ವರು ಆರೋಪಿಗಳ ಪರವಾಗಿ ಕ್ಷಮಧಾನ, ಕ್ಯುರೆಟೀವ್ ಆರ್ಜಿ ದಾಖಲಿಸಲು ಅಗತ್ಯವಾಗಿರುವ ದಾಖಲೆಗಳನ್ನು ತಿಹಾರ್ ಜೈಲು ಅಧಿಕಾರಿಗಳು ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶನಿವಾರ ವಜಾಗೊಳಿಸಿತ್ತು.

ದಾಖಲಾತಿ ಒದಗಿಸುವಂತೆ ಪ್ರತ್ಯೇಕ ಆದೇಶ ನೀಡುವ ಅಗತ್ಯವಿಲ್ಲ. ಜೈಲು ಅಧಿಕಾರಿಗಳು ಈವರೆಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆ ಪತ್ರಗಳನ್ನು ಪಡೆದುಕೊಳ್ಳಬಹುದು ಎಂದು ದೋಷಿಗಳ ಪರ ಪರ ವಕೀಲ ಎ.ಪಿ.ಸಿಂಗ್ ನ್ಯಾಯಾಲಯ ಸೂಚಿಸಿತ್ತು. ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದನ್ನು ವಿಳಂಬಗೊಳಿಸುವ ಉದ್ದೇಶದಿಂದ ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು.

ಮತ್ತೊಂದೆಡೆ, ಫೆಬ್ರವರಿ ೧ ರಂದು ಮರಣದಂಡನೆ ಜಾರಿ ಹಿನ್ನಲೆಯಲ್ಲಿ, ನಿರ್ಭಯಾ ಪ್ರಕರಣದ ಎಲ್ಲ ತಪ್ಪಿತಸ್ಥರ ಮೇಲೆ ತಿಹಾರ್ ಜೈಲಿನ ಸಿಬ್ಬಂದಿ ಹೆಚ್ಚಿನ ನಿಗಾ ಇರಿಸಿದ್ದಾರೆ. ಮರಣದಂಡನೆಗೆ ಮುನ್ನ ಅಪರಾಧಿಗಳು ಗಾಯಗಳಿಗೆ ಒಳಗಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು “ಆತ್ಮಹತ್ಯೆ ನಿಗಾ” ವಹಿಸಲಾಗಿದೆ. ಅವರನ್ನು “ಹೈರಿಸ್ಕ್” ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.