ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ

ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ

ಬೆಂಗಳೂರು,: ಬತ್ತ, ಶೇಂಗಾ, ತೊಗರಿ, ಬಿಳಿ ಜೋಳ, ರಾಗಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ.

ಈ‌ ಸಂಬಂಧ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಕೂಡಲೇ ಅಗತ್ಯ ಇರುವೆಡೆ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ನೇತೃತ್ವದ ಕಾರ್ಯಪಡೆಗಳಿಗೆ ಸೂಚನೆ ನೀಡಲಾಗಿದೆ.

ಬತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 200 ರೂ.ಹಾಗೂ ತೊಗರಿಗೆ ಕ್ವಿಂಟಾಲ್‌ಗೆ 300 ರೂ. ಪ್ರೋತ್ಸಾಹಧನ ನೀಡಲು ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ಯಾವ ಬೆಳೆಗೆ ಎಷ್ಟು ಪ್ರೋತ್ಸಾಹ ಧನ?:

ಸಾಮಾನ್ಯ ಬತ್ತ- ಕ್ವಿಂಟಾಲ್‌ಗೆ 1815 ರೂ. ಬೆಂಬಲ ಬೆಲೆ ಜತೆಗೆ ಪ್ರೋತ್ಸಾಹ ಧನ 200 ರೂ.

ಎ ಗ್ರೇಡ್ ಬತ್ತ- ಕ್ವಿಂಟಾಲ್ ಗೆ 1,835 ರು. ಬೆಂಬಲ‌ ಬೆಲೆ ಜೊತೆ 200 ರೂ. ಪ್ರೋತ್ಸಾಹ ಧನ

ತೊಗರಿ- 5800 ರೂ. ಬೆಂಬಲ‌ ಬೆಲೆ ಜೊತೆ 300 ರೂ. ಪ್ರೋತ್ಸಾಹ ಧನ

ಉಳಿದಂತೆ ಬಿಳಿಜೋಳ ಪ್ರತಿ ಕ್ವಿಂಟಾಲ್ ಗೆ 2, 550 ರೂ., ಮಾಲ್ದಂಡೆಗೆ 2,570 ರೂ., ರಾಗಿಗೆ 3,150 ರೂ., ಮತ್ತು ಶೇಂಗಾಗೆ 5,090 ರೂ. ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.