ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 41,322 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ದೇಶದ ಒಟ್ಟು ಕೊರೊನಾ ಕೇಸ್ಗಳ ಸಂಖ್ಯೆ ಶನಿವಾರ 93,51,110ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ
ಈ ಸಮಯದಲ್ಲಿ ದೇಶದಾದ್ಯಂತ 485 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೋವಿಡ್ 19 ಕಾರಣದಿಂದಾಗಿ ಸಾವಿನ ಸಂಖ್ಯೆ 1,36,200ಕ್ಕೆ ಬಂದು ತಲುಪಿದೆ.