ಮಿಸೆಸ್ ಇಂಡಿಯಾ: ಬಳ್ಳಾರಿಯ ವೀಣಾ ಮೊದಲನೇ ರನ್ನರ್ ಅಪ್! ಮಿಂಚಿದ ಗಣಿನಾಡಿನ ಮಹಿಳಾ ಪ್ರತಿಭೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಗೃಹಿಣಿಯೊಬ್ಬರು ಚೆನೈನಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.ಮೂಲತಃ ಹೊಸಪೇಟೆಯ ನಿವಾಸಿಯಾಗಿರುವ ಟಿ.ಹೆಚ್.ಎಂ.ವೀಣಾ ರಾಜಶೇಖರ ಅವರು ಚೆನೈನ ಖಾಸಗಿ ಹೊಟೇಲ್ ನಲ್ಲಿ ಸೆಪ್ಟೆಂಬರ್ 16 ರಿಂದ 20ರವರೆಗೆ ಜರುಗಿದ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಸೌಂದರ್ಯ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ದೇಶದ ವಿವಿಧ ರಾಜ್ಯಗಳಿಂದ ಬಂದಂತ ಸ್ಪರ್ಧಾಳುಗಳ ನಡುವೆ ವಿಶೇಷ ಗಮನ ಸೆಳೆದಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿರುವ ವೀಣಾ ರಾಜಶೇಖರ ಅವರು ವಿವಾಹಿತ ಮಹಿಳೆಯರಿಗಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಗೃಹಿಣಿಯರ ¨ದುಕು ನಾಲ್ಕು ಗೋಡೆಯೊಳಗೆ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ.ಸಾಮಾನ್ಯವಾಗಿ ಮಹಿಳೆಯರು ಮದುವೆ
ಯಾಗಿ ಬಿಟ್ಟರೆ ಸಾಕು, ಮಕ್ಕಳ ಲಾಲನೆ, ಪಾಲನೆ ಹಾಗೂ ಗಂಡಂದಿರ ಹಾರೈಕೆಯಲ್ಲೇ ಮುಳುಗಿಹೋಗಿರುತ್ತಾರೆ. ಈ ಮಹಿಳೆಯರಿಗೆಲ್ಲ ವೀಣಾ ರಾಜಶೇಖರ ಸ್ಪೂರ್ತಿಯಾಗಿದ್ದಾರೆ.

ಜೂನ್ 8 ರಂದು ಬೆಂಗಳೂರಿನ ಆರ್ ಜಿ ರಾಯಲ್ ಕನ್ವೆಷನ್ ಹಾಲ್ ನಲ್ಲಿ ನಡೆದಿದ್ದ ಮಿಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಸೌಂದರ್ಯವತಿ ವಿಭಾಗದಲ್ಲಿ ಮೊದಲನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದರು.

ಚೆನೈನಲ್ಲಿ ನಡೆದ ಮಿಸೆಸ್ ಇಂಡಿಯಾ ಕಾಂಪಿಟೇಷನ್‍ನಲ್ಲಿ ಹಲವು ಸುತ್ತುಗಳಿರುತ್ತವೆ. ಅದರಲ್ಲಿ ಸೃಜನಾತ್ಮಕ ಸುತ್ತು ಎಂಬ ಸುತ್ತುವಿನಲ್ಲಿ ಹಂಪಿಯ ಕಲ್ಲಿನ ರಥದ ಪ್ರತಿಕೃತಿ ಪ್ರದರ್ಶಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಸಾಂಸ್ಕøತೀಕ ಹಿರಿಮೆಯನ್ನು ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಸಾರಿದ್ದಾರೆ.
ರಾಷ್ಟ್ರೀಯ ಮಟ್ಟದ ಮಿಸೆಸ್ ಇಂಡಿಯಾ ಸ್ಪರ್ಧೆ ಇದಾಗಿದ್ದು, ದೇಶದ ನಾನಾ ರಾಜ್ಯಗಳಿಂದ ಅಂದಾಜು ಅರವತ್ತಕ್ಕೂ ಹೆಚ್ಚು ಮಂದಿ ಮಹಿಳೆಯರು ತಮ್ಮ ಬಾಹ್ಯ ಸೌಂದರ್ಯ ಹಾಗೂ ವ್ಯಕ್ತಿತ್ವದ ಮೆರಗನ್ನು ಪ್ರದರ್ಶಿಸಿ ಪ್ರಶಂಸೆ ಗಳಿಸಿದ್ದಾರೆ. ತೀವ್ರತರ ಸ್ಪರ್ಧೆಯಿದ್ದ ಕಾರ್ಯಕ್ರಮದಲ್ಲಿ ವೀಣಾ ರಾಜಶೇಖರ ಅವರು ಕ್ಲಾಸಿಕಲ್ ಕೆಟಗಿರಿಯಲ್ಲಿ ಮೊದಲನೇ ರನ್ನರ್ ಅಪ್ ಆಗಿ ಪ್ರಶಸ್ತಿ ಗಳಿಸಿರುವುದು ಗಣಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಗೃಹಿಣಿಯರು ಮದುವೆಯಾದ ತಕ್ಷಣವೇ ಏನೋ ಒಂಥರ ಜವಾಬ್ದಾರಿಯ ಗುಡ್ಡಗಳೇ ಮೈಮೇಲೆ ಬಿದ್ದಂತೆ ಮಾಡುತ್ತಾರೆ. ನಮ್ಮದು ಅವಿಭಕ್ತ ಕುಟುಂಬವಾದ್ರೂ ಕೂಡ ಕುಟುಂಬ ಸದಸ್ಯರ ಸಹಕಾರದಿಂದಾಗಿ ಇಷ್ಟೆಲ್ಲಾ ಸಾಧನೆ ಮಾಡಿರುವೆ. ಎಲ್ಲ ಗೃಹಿಣಿ ಯರು ಕೂಡ ಯಾವುದಾದರೊಂದು ಸಾಧನೆ ಗರಿ ತಲುಪಲು ಶ್ರಮಿಸಬೇಕು. ನನಗೆ ಮಿಸೆಸ್ ಇಂಡಿಯಾ ಕಾಂಪಿಟೇಷನ್ ನಲ್ಲಿ ಭಾಗಿಯಾಗಿರೋದು ತುಂಬಾ ಖುಷಿ ತಂದಿದೆ. ಅದರಲ್ಲಿ ಪಾಲ್ಗೊಳ್ಳುವ ಮುಖೇನ ದೇಶದ ನಾನಾ ಸಂಪ್ರದಾಯ, ಭಾಷೆ ಹಾಗೂ ಕಾಸ್ಟ್ಯೂಮ್ ಗಳ ಪರಿಚಯವಾಯಿತು – ವೀಣಾ ರಾಜಶೇಖರ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter