ಇನ್ನೂ …. ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲು ವಾಸಿಗಳ ಜೊತೆ ಮಾತುಕತೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಕೊರೊನಾ ವೈರಸ್ ಪ್ರಬಲಗೊಂಡಿರುವ ಪ್ರಸಕ್ತ ಸಂಕಷ್ಟ ಸಮಯದಲ್ಲಿ ಮುಂದಿನ ವಾರದಿಂದ ವಿಡಿಯೋ ಕಾನ್ಫರೆನ್ಸ್ ವಿಧಾನದ ಮೂಲಕ ಖೈದಿಗಳೊಂದಿಗೆ ಅವರ ಕುಟುಂಬ ಸದಸ್ಯರು, ಬಂಧುಗಳು, ಸ್ನೇಹಿತರು ಮಾತುಕತೆ ನಡೆಸಲು ಅನುಮತಿ ನೀಡಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ.


ಈ ಉದ್ದೇಶಕ್ಕಾಗಿ ದೆಹಲಿಯ ತಿಹಾರ್, ರೋಹಿಣಿ, ಮಂಡೊಲಿ ಜೈಲುಗಳ ಜೊತೆಗೆ ೧೬ ಸಬ್ ಜೈಲುಗಳಲ್ಲಿ ಕಂಪ್ಯೂಟರ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ವರ್ಕ್ ಫ್ರಂ ಹೋಂ, ವರ್ಚುವಲ್ ತರಗತಿಗಳಂತೆ ಜೈಲಿನಲ್ಲಿರುವ ಖೈದಿಗಳನ್ನು ಆನ್ ಲೈನ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆಗೆ ಅವಕಾಶ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


ಖೈದಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಕುಟುಂಬ ಸದಸ್ಯರು ಮಾತುಕತೆ ನಡೆಸಲು ಅನುಮತಿಸಲು ನಿರ್ಧರಿಸಿರುವುದಾಗಿ ಜೈಲು ವಿಭಾಗದ ಮಹಾ ನಿರ್ದೇಶಕ ಜನರಲ್ ಸಂದೀಪ್ ಗೋಯಲ್ ಹೇಳಿದ್ದಾರೆ.
ಈಗಾಗಲೇ ಬ್ರಿಟನ್, ಅಮೆರಿಕಾ ಜತೆಗೆ ಮುಂಬೈನಲ್ಲಿರುವ ಬೈಕುಲ್ಲಾ ಜೈಲಿನಲ್ಲಿ ಖೈದಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿದ್ದಾರೆ.


ತಿಹಾರ್ ಜೈಲಿನಲ್ಲಿ ೧೪ ಸಾವಿರ ಮಂದಿ ಖೈದಿಗಳಿದ್ದು. ಖೈದಿಗಳ ವಕೀಲರು. ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ಹೇಳಿದ್ದಾರೆ.
ತಿಹಾರ್ ಜೈಲಿನಲ್ಲಿ ೧೪೧ ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಖೈದಿಗಳಿಗೆ ಮಾತ್ರವಲ್ಲದೆ ಜೈಲು ವಾರ್ಡನ್ ಗಳಿಗೂ ಕೂಡಾ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಂದರ್ಶಕರ ಮುಖಾಮುಖಿ ಭೇಟಿ ಸ್ಥಗಿತಗೊಳಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಖೈದಿಗಳೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಲಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter