ಖಾಸಗಿ ಆಸ್ಪತ್ರೆ ಮೊಂಡಾಟ : ಅಣ್ಣನ ಮಗಳ ಚಿಕಿತ್ಸೆಗೆ ನಟಿ ಸುಧಾರಾಣಿ ಪರದಾಟ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಕೊರೋನಾ ಆರಂಭವಾದ ನಂತರ ರೋಗಿಗಳನ್ನು ದಾಖಲಿಸಿಕೊಳ್ಳಲೂ ಕೆಲವು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರ ಅದೆಷ್ಟೇ ತಿಳಿವಳಿಕೆ, ಎಚ್ಚರಿಕೆ ನೀಡಿದರೂ ಮೊಂಡಾಟ ಮುಂದುವರಿಸುತ್ತಿವೆ ಎನ್ನಲಾಗುತ್ತಿದೆ.

ನಟಿ ಸುಧಾರಾಣಿ ವಿಚಾರದಲ್ಲಿ ಈ ಆರೋಪ ಸತ್ಯವಾಗಿದೆ. ಸೋಮವಾರ ರಾತ್ರಿ ತಮ್ಮ ಅಣ್ಣನ ಮಗಳು ಕಿಡ್ನಿ ಸ್ಟೋನ್ ನಿಂದ ಬಳಲಿದ ಕಾರಣ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ ವೆಂಟಿಲೇಟರ್ ಇಲ್ಲ, ಬೆಡ್ ಎಲ್ಲ ಎಂಬ ಹುರುಳಿಲ್ಲದ ನೆಪವೊಡ್ಡಿ ಅನಾರೋಗ್ಯ ಪೀಡಿತ ಯುವತಿಯನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದರಿಂದ ಕುಪಿತರಾದ ನಟಿ ಸುಧಾರಾಣಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ದೂರವಾಣಿ ಕರೆ ಮಾಡಿದ ಬಳಿಕವಷ್ಟೇ ಯುವತಿಯನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಕುರಿತು ಸುದ್ದಿಗಾರರೊಡನೆ ಮಾತನಾಡಿದ ಸುಧಾರಾಣಿ, “ತಡರಾತ್ರಿ ಅಣ್ಣನ ಮಗಳನ್ನು ಕರೆತಂದರೆ, ಒಳಗೂ ಕರೆದುಕೊಳ್ಳದೆ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದರು. ಪೊಲೀಸ್ ಆಯುಕ್ತರಿಗೆ ಫೋನ್ ಮಾಡಿದ ನಂತರವಷ್ಟೇ ಹೆದರಿ ಒಳಗೆ ಕರೆದುಕೊಂಡರು. ನಾವು ಯುವತಿಯನ್ನು ದಾಖಲಿಸಿಕೊಳ್ಳಲೂ ಕೇಳಿರಲಿಲ್ಲ. ಆದಾಗ್ಯೂ ಪ್ರಥಮ ಚಿಕಿತ್ಸೆ ನೀಡಲೂ ಸಹ ನಿರಾಕರಿಸಿದರು.

ಇದರಿಂದ ಜನಸಾಮಾನ್ಯರನ್ನು ಕೆಲ ಖಾಸಗಿ ಆಸ್ಪತ್ರೆಗಳು ಎಷ್ಟು ನಿಕೃಷ್ಟವಾಗಿ ಕಾಣುತ್ತಿದ್ದಾರೆ ಎಂದು ತಿಳಿಯಬಹುದು. ಕೊರೋನಾ ಸಂದರ್ಭದಲ್ಲಿ ನಾವೂ ಕೂಡ ವೈದ್ಯರ ಕಷ್ಟ ಅರ್ಥವಾಗುತ್ತದೆ. ಆದಾಗ್ಯೂ, ರೋಗಿಗೆ ಏನಾಗಿದೆ ಎಂಬುದನ್ನೇ ನೋಡಲು ಮುಂದಾಗದಿದ್ದರೆ ಹೇಗೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter