ಈದ್ ಪ್ರಯುಕ್ತ ಅಭಿಮಾನಿಗಳಿಗಾಗಿ ‘ಭಾಯ್ ಭಾಯ್’ ಶೀರ್ಷಿಕೆಯ ಹೊಸ ಹಾಡು ಬಿಡುಗಡೆಗೊಳಿಸಿದ ಸಲ್ಮಾನ್

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಈದ್ ಉಡುಗೊರೆಯಾಗಿ ನಟ ಸಲ್ಮಾನ್ ಖಾನ್ ‘ಭಾಯ್ ಭಾಯ್’ ಶೀರ್ಷಿಕೆ ಹಾಡು ಬಿಡುಗಡೆಗೊಳಿಸಿ ಅವರ ಅಭಿಮಾನಿಗಳ ಆನಂದಕ್ಕೆ ಕಾರಣರಾಗಿದ್ದಾರೆ.‘ಭಾಯ್ ಭಾಯ್’ ಹಾಡು ಸಹೋದರತೆ ಹಾಗೂ ಭಾವೈಕ್ಯತೆಯನ್ನು ಬಿಂಬಿಸುವ ಗೀತೆಯಾಗಿದ್ದು, ನಾವೆಲ್ಲರೂ ಎಂಬ ನೀತಿಯನ್ನು ಒಳಗೊಂಡಿದೆ.ಸಲ್ಮಾನ್ ಅಭಿನಯದ ಚಲನಚಿತ್ರಗಳು ಈದ್ ಸಂದರ್ಭದಲ್ಲಿ ನಿಯಮಿತವಾಗಿ ಬಿಡುಗಡೆಯಾಗುತ್ತಿದ್ದು, ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಸುಮಾರು 100 ಪ್ರತಿಶತದಷ್ಟು ಯಶಸ್ಸಿನ ಅನುಪಾತವನ್ನು ಹೊಂದಿವೆ.

ಈದ್ 2020 ರ ಸಮಯದಲ್ಲಿ ‘ರಾಧೆ’ ಬಿಡುಗಡೆಯಾಗಬೇಕಿತ್ತು ಆದರೆ ಕೊರೋನಾ ಸಾಂಕ್ರಾಮಿಕದಿಂದಾಗಿ, ಭಾರತೀಯ ಚಿತ್ರಮಂದಿರಗಳು ಅನಿರ್ದಿμÁ್ಟವಧಿ ಸ್ಥಗಿತಗೊಂಡಿವೆ. ಹೀಗಾಗಿ ಈ ಬಾರಿ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಹಾಡಿನ ರೂಪದಲ್ಲಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.ಇದೇ ಸಂದರ್ಭದಲ್ಲಿ “ ಎಲ್ಲರಿಗೂ ಈದ್ ಮುಬಾರಕ್. ಈ ವರ್ಷ ಸಾಂಕ್ರಾಮಿಕ ರೋಗವನ್ನು ಎದುರಿಸುವ ಶಕ್ತಿ, ಆಶೀರ್ವಾದ ಎಲ್ಲರಿಗೂ ಸಿಗಲಿ” ಎಂದಿರುವ ಸಲ್ಮಾನ್, “ಈ ವರ್ಷದ ಈದ್ ಹಬ್ಬಕ್ಕೆ ನಮ್ಮ ಚಲನಚಿತ್ರವನ್ನು ಬಿಡುಗಡೆ ಮಾಡಲು ನಮಗೆ ಸಾಧ್ಯವಾಗದ ಕಾರಣ, ನನ್ನ ಎಲ್ಲ ಅಭಿಮಾನಿಗಳಿಗಾಗಿ ವಿಶೇಷ ಹಾಡಿನಲ್ಲಿ ಕೆಲಸ ಮಾಡಿದ್ದೇನೆ. ಇದು ಸಹೋದರತ್ವ ಮತ್ತು ಏಕತೆಯ ಮನೋಭಾವವನ್ನು ಸೂಚಿಸುವ ಕಾರಣ ‘ಭಾಯ್ ಭಾಯ್’ ಎಂಬ ಶೀರ್ಷಿಕೆ ನೀಡಲಾಗಿದೆ” ಎಂದಿದ್ದಾರೆ.

ಕೊರೋನಾ ಬಿಕ್ಕಟ್ಟಿನ ನಡುವೆಯೂ ಸಲ್ಮಾನ್, ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲು ಇಚ್ಛಿಸದೆ, ಪನ್ವೆಲ್‍ನಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕನಿಷ್ಠ ಸಿಬ್ಬಂದಿ ಮತ್ತು ಸಂಪನ್ಮೂಲಗಳೊಂದಿಗೆ ‘ಭಾಯ್ ಭಾಯ್’ ಚಿತ್ರೀಕರಣ ಮಾಡಿದ್ದಾರೆ.‘ಪ್ಯಾರ್ ಕರೋನಾ’ ಮತ್ತು ‘ತೇರೆ ಬಿನಾ’ ಚಿತ್ರದ ನಂತರ ಲಾಕ್‍ಡೌನ್ ನಡುವೆ ಸೂಪರ್‍ಸ್ಟಾರ್ ಬಿಡುಗಡೆ ಮಾಡಿದ ಮೂರನೇ ಹಾಡು ಇದಾಗಿದ್ದು, ಸ್ವತಃ ದನಿಯಾಗಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter