ಪ್ರಥಮ ಬಾರಿಗೆ “ವೈಲ್ಡ್ ಕರ್ನಾಟಕ”ದಲ್ಲಿ ಸಿನಿಮಾ ನಟರು!

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಇದೇ ಮೊದಲ ಬಾರಿಗೆ ಚಲನಚಿತ್ರ ನಟರು ಬಹುಭಾμÉಯ “ವೈಲ್ಡ್ ಕರ್ನಾಟಕ” ಕಾರ್ಯಕ್ರಮವೊಂದಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ.ರಾಜ್ಯ ಅರಣ್ಯ ಇಲಾಖೆಯಡಿಯಲ್ಲಿ ವನ್ಯ ಜೀವಿಗಳ ಕಥೆ ಮೂಡಿಬರಲಿದ್ದು, ಈ ಕಾರ್ಯಕ್ರಮ ಡಿಸ್ಕವರಿ ಚಾನೆಲ್‍ನಲ್ಲಿ ತೆರೆ ಕಾಣಲಿದೆ.

ಸ್ಡಿಕವರಿ ಚಾನಲ್, ಇದೇ ಮೊದಲ ಬಾರಿಗೆ ಚಲನಚಿತ್ರ ನಟರನ್ನು ಬಳಸಿಕೊಂಡು ವೈಲ್ಡ್ ಕರ್ನಾಟಕ ಎಂಬ ಕಾರ್ಯಕ್ರಮವನ್ನು ನರೇಟ್ ಮಾಡುತ್ತಿದೆ ಎಂದು ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ.ಜೂನ್ 5 ರಂದು ವಿಶ್ವ ಪರಿಸರ ದಿನದ ಪ್ರಯುಕ್ತ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗಿದೆ.ಚಿತ್ರ ನಿರ್ಮಾಪಕ ಅಮೋಘವರ್ಷ ಜೆಎಸ್ ಮತ್ತು ಕಲ್ಯಾಣ್ ಕುಮಾರ್ ಅವರು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ಸಾಕ್ಷ್ಯ ಚಿತ್ರ ನಿರ್ಮಿಸುತ್ತಿದ್ದಾರೆ.

ಅಂದು ಸಂಜೆ 6 ಗಂಟೆಗೆ ರಿಷಬ್ ಶೆಟ್ಟಿ ಅವರ ನಿರೂಪಣೆಯಲ್ಲಿ ಕರ್ನಾಟಕ ವನ್ಯಜೀವಿಗಳ ಕುರಿತಾದ ಸಾಕ್ಷ್ಯಚಿತ್ರ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.ಈ ಕುರಿತು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಪೆÇೀಸ್ಟ್‍ವೊಂದನ್ನು ಶೇರ್ ಮಾಡಿರುವ ರಿಷಭ್ ಶೆಟ್ಟಿ ಅವರು, ‘‘ವೈಲ್ಡ್ ಕರ್ನಾಟಕ‘ ಕಾರ್ಯಕ್ರಮವನ್ನು ನನ್ನ ಮಾತೃ ಭಾμÉಯಲ್ಲಿ ನಿರೂಪಿಸಿದಕ್ಕೆ ನನಗೆ ಹೆಮ್ಮೆ ಆಗುತ್ತಿದೆ‘ ಎಂದು ಅವರು ಬರೆದುಕೊಂಡಿದ್ದಾರೆ.ಬಹುಭಾμÉಯಲ್ಲಿ ‘ವೈಲ್ಡ್ ಕರ್ನಾಟಕ’ ಕಾರ್ಯಕ್ರಮ ಮೂಡಿ ಬರಲಿದೆ.

ವೈಲ್ಡ್ ಕರ್ನಾಟಕ ಕಾರ್ಯಕ್ರಮವನ್ನು ಕನ್ನಡದಲ್ಲಿ ರಿಷಭ್ ಶೆಟ್ಟಿ, ಇಂಗ್ಲಿμïನಲ್ಲಿ ಡೇವಿಡ್ ಅಟೆಂಡ್ಬರೋ ಹಾಗೂ ತಮಿಳು ಮತ್ತು ತೆಲುಗು ಭಾμÉಯಲ್ಲಿ ನಟ ಪ್ರಕಾಶ್ ರೈ ಮತ್ತು ಹಿಂದಿಯಲ್ಲಿ ರಾಜ್ ಕುಮಾರ್ ರಾವ್ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter