ದೇಶದಲ್ಲಿ ಕೊರೊನಾ ಸೋಂಕು ಪ್ರಸರಣ ದ್ವಿಗುಣಗೊಳ್ಳುತ್ತಿದೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಕೋವಿಡ್ -೧೯ ವೈರಸ್ ನಿಯಂತ್ರಿಸಲು ದೇಶಾದ್ಯಂತ ಜಾರಿಗೊಳಿಸಲಾಗಿದ್ದ ನಾಲ್ಕನೇ ಹಂತದ ನಿರ್ಬಂಧಗಳು ಇದೇ ೩೧ ರಂದು ಕೊನೆಗೊಳ್ಳಲಿವೆ. ಆದರೆ ಕೊರೊನಾ ಸೋಂಕು ಪ್ರಸರಣದ ವೇಗ ಮಾತ್ರ ಕಡಿಮೆಯಾಗುತ್ತಿಲ್ಲ ಬದಲಿಗೆ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ.

ಕಳೆದೊಂದು ವಾರದಿಂದ ಪ್ರತಿದಿನವೂ ೬ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ದೇಶದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯದ ಕೊಡುಗೆ ಮೂರನೇ ಒಂದರಷ್ಟಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಆ ರಾಜ್ಯವೊಂದರಲ್ಲೇ ೫೦ ಸಾವಿರಕ್ಕೂ ಹೆಚ್ಚು ಕೊರನಾ ವೈರಸ್ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನ ಗುಜರಾತ್ ಹೊಂದಿದ್ದು, ತಮಿಳುನಾಡು ಮೂರನೇ ಸ್ಥಾನದಲ್ಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter