ಬ್ಯಾಂಕ್‍ಗಳ ಖಾತೆ ಮೇಲೆ ನಿಗಾ ವಹಿಸಲು ಸೂಚನೆ

ಬ್ಯಾಂಕ್‍ಗಳ ಖಾತೆ ಮೇಲೆ ನಿಗಾ ವಹಿಸಲು ಸೂಚನೆ

ಬೆಳಗಾಯಿತು ವಾರ್ತೆ
ಬಳ್ಳಾರಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‍ಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡಿದರೆ ಮತ್ತು ಡ್ರಾ ಮಾಡಿದರೇ ಅವುಗಳ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಜಿಲ್ಲಾ ಅಪರ ಚುನಾವಣಾಧಿಕಾರಿಗಳಾಗಿರುವ ಅಪರ ಜಿಲ್ಲಾಧಿಕಾರಿ ಎಂ.ಸತೀಶಕುಮಾರ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.


ವಿಜಯನಗರ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದಬ್ಯಾಂಕ್ ಮ್ಯಾನೇಜರ್ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಎರಡು ತಿಂಗಳು ಅವಧಿಯಲ್ಲಿ ದಿಢೀರ್ ಆಗಿ ಡ್ರಾಮಾಡುತ್ತಿದ್ದರೇ ಅಂತಹ ಬ್ಯಾಂಕ್ ಖಾತೆಗಳ ವಿವರ ಸಹನೀಡಬೇಕು. ಕಳೆದ ಎರಡು ತಿಂಗಳಲ್ಲಿ 1ಲಕ್ಷಕ್ಕಿಂತ ಹೆಚ್ಚುವ್ಯವಹಾರ ನಡೆದಿದ್ದರೂ ಅದರ ಮಾಹಿತಿ ನೀಡಿ; ಅಂತಹ ಖಾತೆಗಳತ್ತ ವಿಶೇಷ ಗಮನಹರಿಸಲು ಅನುಕೂಲವಾಗುತ್ತದೆ ಎಂದರು.

ನೀತಿ ಸಂಹಿತೆಯು ಇಡೀ ಜಿಲ್ಲೆಗೆ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ ಅವರು ಜಿಲ್ಲೆಯಲ್ಲಿ 320 ಬ್ಯಾಂಕ್ ಶಾಖೆಗಳಿದ್ದು, ಅವುಗಳೆಲ್ಲವುದರ ವರದಿಯನ್ನು ಬ್ಯಾಂಕ್ ಮ್ಯಾನೇಜರ್ ಗಳು ಮತ್ತು ಕೋ-ಆರ್ಡಿನೇಟರ್ಗಳು ಪ್ರತಿನಿತ್ಯ ವರದಿಯನ್ನು ಚುನಾವಣಾ ವೆಚ್ಚ ಪರಿಶೀಲನಾವಿಭಾಗಕ್ಕೆ ಸಲ್ಲಿಸಬೇಕು.ವಾರದ ವರದಿ ಸಲ್ಲಿಸುವುದು ಕಡ್ಡಾಯ ಎಂದು ವಿವರಿಸಿದ ಅವರು ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದಲ್ಲಿ ಪ್ರಜಾಪ್ರತಿನಿತ್ಯ ಕಾಯ್ದೆ ಸೆಕ್ಷನ್ 32ರ ಅನ್ವಯ ಬ್ಯಾಂಕ್ ಮ್ಯಾನೇಜರ್ ಮತ್ತು ಬ್ಯಾಂಕ್ ಕೋ-ಆರ್ಡಿನೇಟರ್ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಜನಧನ ಖಾತೆಗಳ ಮೇಲೆ ನಿಗಾ ಇಡಿ:
ಬಹಳÀಷ್ಟು ದಿನಗಳಿಂದ ನಿಷ್ಕ್ರೀಯವಾಗಿರುವ ಜನಧನ ಖಾತೆಗಳಿಗೆ ಹಾಗೂ ಶೂನ್ಯ ಖಾತೆಗಳಿಗೆ ದಿಢೀರನೆ ಹಣ ಬಂದು ಬಿಳುವ ಸಾಧ್ಯತೆ ಇದ್ದು, ಪರಿಶೀಲಿಸಿ ವರದಿ ಕೊಡಿ ಎಂದರು. ಶಾಂತಿ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜನರ ಸೇವೆ ಮಾಡುವ ತಾವು ನಮ್ಮೊಂದಿಗೆ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬ್ಯಾಂಕ್ ಅಧಿಕಾರಿಗಳು ಇದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.