ಆಗಸ್ಟ್ 1ರಿಂದ ವಂದೇ ಭಾರತ್ ಮಿಷನ್ 5ನೇ ಹಂತ ಆರಂಭ

Share on facebook
Share on twitter
Share on linkedin
Share on whatsapp
Share on email

ನವದೆಹಲಿ : ಕರೋನ ಸಂಕಷ್ಟಕ್ಕೆ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ನಿರಂತರವಾಗಿ ಇನ್ನೂ ಮುಂದುವರೆದಿದ್ದು ಇದೀಗ ವಂದೇ ಭಾರತ್ ಮಿಷನ್ 5ನೇ ಹಂತ ಆಗಸ್ಟ್ 1ರಿಂದ ಆರಂಭವಾಗಲಿದೆ.


ಈವರೆಗೆ ವಿದೇಶದಲ್ಲಿ ಸಿಲುಕಿದ್ದ 2.5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಘೋಷಣೆಯಾಗಿ 4 ತಿಂಗಳು ಕಳೆದಿವೆ.ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನಗಳನ್ನು ಕಳುಹಿಸಲಾಗುತ್ತಿದೆ. ಇದೀಗ ವಂದೇ ಭಾರತ್ ಮಿಷನ್ನ 5ನೇ ಹಂತ ಆಗಸ್ಟ್ 1ರಿಂದ ಆರಂಭವಾಗಲಿದೆ.

4 ತಿಂಗಳಿನಿಂದಲೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನಗಳನ್ನು ಕಳುಹಿಸಲಾಗುತ್ತಿದೆ. ಇದೀಗ ವಂದೇ ಭಾರತ್ ಮಿಷನ್ 5ನೇ ಹಂತ ಆಗಸ್ಟ್ 1ರಿಂದ ಆರಂಭವಾಗಲಿದೆ.


ಈ ಬಗ್ಗೆ ಏರ್ ಇಂಡಿಯಾ ಘೋಷಣೆ ಮಾಡಿದ್ದು, ಭಾರತದಲ್ಲಿ 3ನೇ ಹಂತದ ಅನ್ಲಾಕ್ ಜಾರಿಯಾಗುವ ದಿನವೇ 5ನೇ ಹಂತದ ವಂದೇ ಭಾರತ್ ಮಿಷನ್ ಶುರುವಾಗಲಿದೆ. ಏರ್ ಇಂಡಿಯಾ ಇದಕ್ಕೆ ಇನ್ನೂ ಬುಕಿಂಗ್ ಆರಂಭಿಸಿಲ್ಲ. ಏರ್ ಇಂಡಿಯಾ ಮೂಲಕ ಈಗಾಗಲೇ ವಂದೇ ಭಾರತ್ ಮಿಷನ್ ಅಡಿ 53 ವಿಮಾನಗಳಿಂದ ವಿದೇಶದಲ್ಲಿ ಸಿಲುಕಿದ್ದ 2.5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆತರಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter