ರೊಮಾನಿಯಾದಲ್ಲಿ ಮೊದಲ ಕೋವಿದ್-19 ಪ್ರಕರಣ ಪತ್ತೆ

Share on facebook
Share on twitter
Share on linkedin
Share on whatsapp
Share on email

ಬುಚಾರೆಸ್ಟ್, :ರೊಮಾನಿಯಾದಲ್ಲಿ ಮೊದಲ ಕೋವಿದ್-19 ಸೋಂಕು ಪ್ರಕರಣ ಪತ್ತೆಯಾಗಿದೆ.

ಇತ್ತೀಚೆಗೆ ಇಟಲಿಯಿಂದ ಆಗಮಿಸಿದ್ದ 71 ವರ್ಷದ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದ್ದ 20 ವರ್ಷದ ಯುವಕನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈತನ ಜೊತೆಗೆ, ಇವನ 7 ಕುಟುಂಬ ಸದಸ್ಯರನ್ನು ಕೂಡ ತಪಾಸಣೆಗೊಳಪಡಿಸಲಾಗಿದೆ.

ಆದರೆ, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಸದ್ಯ ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುತ್ತಿದೆ.
71 ವರ್ಷದ ಇಟಾಲಿಯನ್ ವ್ಯಕ್ತಿ ತನ್ನ ಪತ್ನಿಯನ್ನು ಭೇಟಿ ಮಾಡಲು ರೊಮಾನಿಯಾಗೆ ಆಗಮಿಸಿದ್ದ ಎನ್ನಲಾಗಿದೆ.

ರೊಮಾನಿಯಾದಲ್ಲಿ ಸೋಂಕು ತಗುಲಿರುವುದಾಗಿ ಶಂಕೆ ವ್ಯಕ್ತವಾಗಿರುವ 33 ವ್ಯಕ್ತಿಗಳ ರಕ್ತದ ಮಾದರಿಗಳನ್ನು ತಪಾಸಣೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter