ಬಳ್ಳಾರಿ : ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಬಂದ್ಗೆ ಕರ್ನಾಟಕ ಜನಸೈನ್ಯ ಸಂಘಟನೆ ಸಂಪೂರ್ಣವಾದ ಬೆಂಬಲವನ್ನು ವ್ಯಕ್ತಪಡಿಸಿದೆ.
ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಮುಂದೆ ಕರ್ನಾಟಕ ಜನಸೈನ್ಯದ ರಾಜ್ಯಾಧ್ಯಕ್ಷರಾದ ಕೆ.ರ್ರಿಸ್ವಾಮಿ, ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಫಯಾಜ್ ಭಾಷ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಧಕೃಷ್ಣ ಅವರುಗಳು ಉರುಳು ಸೇವೆ ಮಾಡಿ ನೂರಾರು ತೆಂಗಿನಕಾಯಿಗಳನ್ನು ಸಮರ್ಪಿಸುವ ಮೂಲಕ ಶ್ರೀ ಕನಕದುರ್ಗಮ್ಮ ತಾಯಿಯು ಆನಂದ್ಸಿAಗ್ ಅವರಿಗೆ ಸ್ವಾರ್ಥ ಬುದ್ಧಿಯನ್ನು ಬಿಟ್ಟು ಜಿಲ್ಲೆಯ ಎಲ್ಲಾ ನಾಗರಿಕರನ್ನು ಒಂದೇ ಕುಟುಂಬದ ಅಣ್ಣತಮ್ಮಂದಿರೆAಬ ಭಾವನೆ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡದಂತೆ ಒತ್ತಾಯಿಸುವ ಶಕ್ತಿಯನ್ನು ದಯಪಾಲಿಸಲಿ ಹಾಗೆ ಮುಖ್ಯಮಂತ್ರಿಗಳಿಗೆ ಸರ್ವಾಧಿಕಾರಿ ಧೋರಣೆಯ ಆಡಳಿತವನ್ನು ಬಿಟ್ಟು ಸರ್ವಾನುಮತದ ಸಮಸ್ತ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯರು ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಜಿಲ್ಲೆಯ ಹಿರಿಯ ಚಿಂತಕರು, ನಾಡಪರ ಚಿಂತಕರು, ಕಲಾವಿದರು, ರೈತ ಬಾಂಧವರು, ಪದವೀಧರರು, ಎಲ್ಲಾ ಸಂಘ-ಸAಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಎಲ್ಲರ ಅಭಿಪ್ರಾಯವನ್ನು ತಿಳಿದುಕೊಂಡು ಆಡಳಿತವನ್ನು ನಡೆಸುವಂತಹ ಬುದ್ಧಿಯನ್ನು ದಯಪಾಲಿಸಲಿ ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಿದ್ದೇವೆ ಎಂದರು.
ಜಿಲ್ಲೆಯ ಎಲ್ಲಾ ನಾಗರಿಕರು ಶ್ರೀ ಕನಕದುರ್ಗಮ್ಮ ದೇವಿಗೆ ಮಕ್ಕಳಂತೆಯೇ. ಹೀಗಾಗಿ ಯಾವುದೇ ಕಾರಣಕ್ಕೂ ಜಿಲ್ಲೆಯನ್ನು ವಿಭಜನೆಗೊಳಿಸಿ, ತಮ್ಮ ಮಕ್ಕಳ ಮೇಲೆ ಮಲತಾಯಿ ಧೋರಣೆ ಹೊಂದುವುದು ಬೇಡ ಎಂದು ಆ ತಾಯಿಯಲ್ಲಿ ಪ್ರಾರ್ಥಿಸೋಣ. ಹಾಗೆಯೇ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟಕ್ಕೆ ಜಯಸಿಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಿ.ಹೊನ್ನೂರಪ್ಪ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಕೆ.ಎಸ್.ಅಶೋಕ್ಕುಮಾರ್, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಎಂ.ಚೆAಚಯ್ಯ, ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಫಯಾಜ್ ಭಾಷ, ಬಳ್ಳಾರಿ ನಗರ ಅಧ್ಯಕ್ಷರಾದ ಹುಂಡೇಕರ್ ರಾಜೇಶ್, ಸ್ಪೂರ್ತಿಸೈನ್ಯ ಜಿಲ್ಲಾಧ್ಯಕ್ಷರಾದ ಲಕ್ಷಿö್ಮನಾರಾಯಣ ಶೆಟ್ಟಿ, ಚಿಟ್ಟಿ, ಹೊನ್ನೂರುಸ್ವಾಮಿ, ರಾಧಾಕೃಷ್ಣ, ಮುರಳಿ, ಗುರುರಾಜ್, ಹೈದರ್, ಅಮರ್, ಹೊನ್ನಳ್ಳಿ ಹಸೇನ್ ಇನ್ನು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.