ಕೃಷಿ ನೀತಿಯ ವಿರುದ್ಧ ಆಕ್ರೋಶ, ರೈತರ ಪ್ರತಿಭಟನೆಯಲ್ಲಿ 50 ಸಾವಿರ ಜನ ಭಾಗಿ

Share on facebook
Share on twitter
Share on linkedin
Share on whatsapp
Share on email

ಥಾಣೆ: ಕೇಂದ್ರದ ಕೃಷಿ ತಿದ್ದುಪಡಿ ಮಸೂದೆ ಮತ್ತು ನೀತಿಯ ವಿರುದ್ಧ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ಮಹಾರಾಷ್ಟ್ರದಲ್ಲಿ ಎಐಕೆಎಸ್ ನೇತೃತ್ವದಲ್ಲಿ 21 ಜಿಲ್ಲೆಗಳಲ್ಲಿ 50ಸಾವಿರಕ್ಕೂ ಬೀದಿಗಿಳಿದು ರಸ್ತೆ ತಡೆ ಚಳವಳಿ ಮಾಡಿದ್ದಾರೆ.


ರೈತರು ರಾಜ್ಯ ಹೆದ್ದಾರಿಗಳನ್ನು ತಡೆದು ಮೂರು ಕೃಷಿ ಮಸೂದೆಗಳ ಪ್ರತಿಗಳನ್ನು ಸುಟ್ಟುಹಾಕಿದರು.ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಯುವಕರು ಭಾಗಿಯಾಗಿದ್ದರು.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಇದು ಮಹಾರಾಷ್ಟ್ರದ ಅತಿದೊಡ್ಡ ದೊಡ್ಡ ಪ್ರತಿಭಟನೆಯಾಗಿದೆ.


ಪಾಲ್ಘರ್, ಥಾಣೆ, ನಾಸಿಕ್ ಮತ್ತು ಅಹ್ಮದ್‌ನಗರ ಜಿಲ್ಲೆಗಳಲ್ಲಿ ಬೃಹತ್ ‘ರಸ್ತೆ ರೊಕೊ’ ಪ್ರತಿಭಟನೆ ಜರುಗಿದ್ದು ಒಟ್ಟು 30ಸಾವಿರ ರೈತರು ಭಾಗವಹಿಸಿದ್ದಾರೆ ಎಂದು ಎಐಕೆಎಸ್ ಡಾ.ಅಶೋಕ್ ಧವಾಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಸಿಕ್, ಅಹ್ಮದ್‌ನಗರ, ಪಾಲ್ಘರ್, ಥಾಣೆ ಮತ್ತು ಇತರ ಹಲವು ಜಿಲ್ಲೆಗಳಲ್ಲಿ, ರಾಜ್ಯದ ಪ್ರಮುಖ ಹೆದ್ದಾರಿ ತಡೆ ಮಾಡಲಾಗಿದೆ. ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter