ಡಿಸಿಎಂ ಗೋವಿಂದ ಕಾರಜೋಳ ಗುಣಮುಖರಾಗಲೆಂದು ಪೂಜೆ

Share on facebook
Share on twitter
Share on linkedin
Share on whatsapp
Share on email

ಹರಪನಹಳ್ಳಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹಾಗೂ ಮಾದಿಗ ಗುರು ಪೀಠದ ಮಾದಾರ ಚನ್ನಯ್ಯ ಶ್ರೀಗಳಿಗೆ ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆ ಅವರೀರ್ವರು ಶೀಘ್ರವಾಗಿ ಗುಣಮುಖರಾಗಲೆಂದು ತಾಲೂಕು ಮಾದಿಗ ಸಮಾಜದ ಮುಖಂಡರು ಪಟ್ಟಣದ ಇತಿಹಾಸ ಸುಪ್ರಸಿದ್ಧ ಶ್ರೀ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ.

ತಾಲೂಕು ದಲಿತ ವಿದ್ಯಾರ್ಥಿಗಳ ಬೀಚಿ ಅಭಿಮಾನಿ ಬಳಗದ ಸಂಘದ ಅಧ್ಯಕ್ಷ ಶೃಂಗಾರತೋಟ ನಿಂಗರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಬಣ) ಅಧ್ಯಕ್ಷ ತೌಡೂರು ಮಾರುತಿ ಸೇರಿದಂತೆ ಮುಖಂಡರಾದ ಚಾರ್ಯಪ್ಪ, ಚಂದ್ರು ಗುಂಡಗತ್ತಿ, ಮಾರುತಿ ಹಲುವಾಗಲು, ಕೊಟ್ರಯ್ಯ ಟಿ.ಎಂ, ಮಲ್ಲಿಕಾರ್ಜನ ಬಾಗಳಿ, ಹೊನ್ನಪ್ಪ, ಪ್ರಶಾಂತ ಶೃಂಗಾರತೋಟ, ಅರುಣ್ ಇತರರು ಭಾಗಿಯಾಗಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹಾಗೂ ಮಾದಿಗ ಗುರು ಪೀಠದ ಮಾದಾರ ಚನ್ನಯ್ಯ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲೆಂದು ಶ್ರೀ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter